ಬೆಂಗಳೂರು: ನಿಮಗೆ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುವ ಹವ್ಯಾಸ ಇದ್ರೆ ಈ ಸ್ಟೋರಿ ಒಮ್ಮೆ ನೋಡಿ. ರೀಲ್ಸ್ ಮಾಡೋ ಟೈಂ ನಲ್ಲಿ ಟ್ರಾಫಿಕ್ ರಯುಲ್ಸ್ ಬ್ರೇಕ್ ಮಾಡೋರ ಮೇಲೂ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಕೆಲವೊಬ್ರು ರೀಲ್ಸ್ ಮಾಡುವ ಶೋಕಿಗೆ ಬಿದ್ದು, ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೇ ಬೇಕಾಬಿಟ್ಟಿಯಾಗಿ ನಿಯಮ ಮೀರಿ ರೀಲ್ಸ್ ಮಾಡುತ್ತಾರೆ.
ಹೀಗೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದವರ ವಿರುದ್ಧ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡು ದಂಡ ವಸೂಲಿ ಮಾಡಿದ್ದಾರೆ. ರೀಲ್ಸ್ ಮಾಡಿ ಎಷ್ಟು ಲೈಕ್ ಬಂತು ಎಷ್ಟು ಶೇರ್ ಆಯ್ತು ಅಂತ ನೀವೂ ಚೆಕ್ ಮಾಡೋ ಅಷ್ಟರಲ್ಲಿ ಫೈನ್ ನೋಟೀಸ್ ನಿಮ್ಮ ಮನೆ ಬಾಗಿಲಿಗೆ ಬರುತ್ತೆ. ಕಳೆದ ಒಂದೇ ವರ್ಷ ರೀಲ್ಸ್‌ನಲ್ಲಿ ರೂಲ್ಸ್ ಬ್ರೇಕ್ ಮಾಡಿದ ಪರಿಣಾಮ ಸಂಚಾರ ಪೊಲೀಸರು 40 ಕೇಸ್ ದಾಖಲಿಸಿದ್ದಾರೆ. ಸಂಚಾರಿ ಪೊಲೀಸರ ಸೋಷಿಯಲ್ ಮೀಡಿಯಾ ಸೆಲ್ ಇಂತಹ ವಿಡಿಯೋಗಳನ್ನು ಮಾನಿಟರಿಂಗ್ ಮಾಡುತ್ತಿರುತ್ತೆ. ಸದ್ಯ ಹೀಗೆ ರೀಲ್ಸ್ ಮಾಡುವ ಯುವಕನೊಬ್ಬ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿ ವಿಡಿಯೋ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಈತನಿಗೆ 17 ಸಾವಿರದ 500 ರೂಪಾಯಿ ದಂಡ ಹಾಕಿದ್ದಾರೆ ವಿಪರ್ಯಾಸವೆಂದರೆ ಆತ ತಾನು ನಿಯಮ ಮೀರಿದ್ದಕ್ಕೆ ದಂಡ ಕಟ್ಟಿದ್ದೇನೆ ಎಂದು ಕೂಡ ರೀಲ್ಸ್ ಮಾಡಿದ್ದಾನೆ. ಆ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ವಾರ ಸಹ ಸೋಷಿಯಲ್ ಮೀಡಿಯಾದಲ್ಲಿ ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟವರ ವಿರುದ್ದ ಒಟ್ಟು 40 ಪ್ರಕರಣ ದಾಖಲಿಸಲಾಗಿದೆ.
ಇನ್ನೂ ನಿಯಮ ಮೀರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡರು ಎಚ್ಚರಿಕೆ ನೀಡಿದ್ದಾರೆ.
PublicNext
29/06/2022 01:45 pm