ಹೌದು ನಗರದಲ್ಲಿ ಹೋಟೆಲ್ ಗಳನ್ನ 1 ಗಂಟೆಯವರೆಗೂ ತೆಗೆಯಬೇಕೆಂದು ಆರ್ಡರ್ ಆಗಿದ್ರು ಕೂಡ ನಗರದ ಕೆಲವು ಕಡೆ ಮಧ್ಯರಾತ್ರಿಯ ವರೆಗೂ ಹೋಟೆಲ್ ತೆಗೆಯಲು ಬಿಡುತ್ತಿಲ್ಲ.. ಬೇಗ ಮುಚ್ಚಿ ಎಂದು 11 ಗಂಟೆಗೆ ಪೊಲೀಸ್ ನವ್ರು ಕ್ಲೋಸ್ ಮಾಡಿಸುತ್ತಿದ್ದಾರಂತೆ..
ಈ ಹಿನ್ನಲೆ ಈಗಾಗ್ಲೆ ಹೋಟೆಲ್ ಮಾಲಿಕರು ಪೊಲೀಸ್ ರಿಗೆ ಮನವಿ ಮಾಡಿಕೊಂಡಿದ್ದಾರೆ.. ಆದ್ರೆ ಇದೆ ರೀತಿ ಮುಂದುವರೆಯಬಾರದು ಎಕಂದ್ರೆ ಕೋವಿಡ್ ಹಿನ್ನಲೆ ಹೋಟೆಲ್ ಗಳಿಗೆ ಬಹಳ ನಷ್ಟವಾಗಿದೆ.. ಈಗ ಚೇತರಿಸಿಕೊಳ್ಳುತ್ತಿದ್ದೇವೆ.. 1 ಗಂಟೆಯ ವರೆಗೂ ಹೋಟೆಲ್ ತೆಗೆಯಬಹುದು ಎಂದು ಸರ್ಕಾರ ಆರ್ಡರ್ ಮಾಡಿದಾಗ ಬಹಳ ಸಂತೋಷವಾಯಿತು ಆದ್ರೀಗ ಇಂತಹ ಬೆಳವಣಿಗೆ ಇಂದ ಬಹಳ ಬೇಸರವಾಗ್ತಿದೆ..
ವ್ಯಾಪಾರ ಮಾಡುವ ಸಂದರ್ಭದಲ್ಲಿ ಹೆ ಮುಚ್ರಿ ಅಂತ ಪೊಲೀಸ್ ನವ್ರು ಕೋಲಿನಲ್ಲಿ ಬಡಿದ್ರೆ ಗ್ರಾಹರಿಗೆ ಕಿರಿ ಕಿರಿಯಾಗುತ್ತೆ.. ರಾತ್ರಿ ಕೆಲಸ ಮುಗಿಸಿ ಬರುವವರಿರುತ್ತಾರೆ, ದೂರದ ಪ್ರಯಾಣಿಕರು ಊಟಕ್ಕೆ ಬರಬಹುದು ಇದ್ರಿಂದ ಸಾರ್ವಜನಿಕರಿಗೂ ಸಹ ಸಹಾಯವಾಗುತ್ತೆ.. ಇದು ಇಲ್ಲಿಗೆ ನಿಲ್ಲಬೇಕು ಇಲ್ಲದಿದ್ಧಲ್ಲಿ ನಾವು ಮುಂದುವರೆಯುತ್ತೇವೆ ಎಂದು ಹೋಟೆಲ್ ಮಾಲಿಕರ ಸಂಘದ ಅದ್ಯಕ್ಷರು ಪಿ.ಸಿ ರಾವ್ ತಿಳಿಸಿದ್ದಾರೆ..
ಬೈಟ್- .ಸಿ ರಾವ್ - ಹೋಟೆಲ್ ಮಾಲಿಕರ ಸಂಘದ ಅದ್ಯಕ್ಷರು
PublicNext
26/06/2022 01:53 pm