ಬೆಂಗಳೂರು : ಲಾಯರ್ ಗಲಾಟೆ ಆಗ್ತಿದೆ ಎಂದು ಕರೆ ಮಾಡಿದ ಮೊಬೈಲ್ ವೊಂದು ಸ್ವಿಚ್ಡ್ ಆಫ್ ಆಗಿತ್ತು. ಇನ್ನು ಕರೆ ಬಂದ ನಂಬರ್ ಗೆ ಕಾಲ್ ಮಾಡಿದಾಗ ಲಾಯರ್ ಸಾಹೇಬರ ಅಸಲೀಯತ್ತು ಬೆಳಕಿಗೆ ಬಂದಿತ್ತು.
ಕಾಲ್ ಮಾಡಿದ್ದ ಲಾಯರ್ ಸಾಹೇಬರ ನಂಬರ್ ನ್ನು ಡಿಸ್ಪ ಮಾಡಿ ತೋರಿಸಿದಾಗ ನಶೆಯಲ್ಲಿದ್ದ ಲಾಯರ್ ಸಾಹೇಬರು ಅಮೃತಹಳ್ಳಿ ಪೊಲೀಸರ ಮೇಲೆ ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ನಿಂಧಿಸಿದ್ದಾನೆ.
ಸೊಂಟದ ಕೆಳಗಿನ ಪದ ಬಳಕೆಗೆ ಪಕ್ಕದಲ್ಲಿದ್ದ ರಮೇಶ್ ಎಂಬಾತ ಲಾಯರ್ ಸುದರ್ಶನ್ ರವರನ್ನ ಪ್ರಶ್ನಿಸಿದ್ದಾನೆ. ಲಾಯರ್ ಸುದರ್ಶನ್ ರಮೇಶ್ ರನ್ನು ಕೆಟ್ಟದಾಗಿ ಬೈಯ್ಯಲು ಮುಂದಾದಾಗ ಲಾಯರ್ & ರಮೇಶ್ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರಿಗೂ ಗಾಯಗಳಾಗಿವೆ.
ಇನ್ನು ಗಲಾಟೆ ಬಿಡಿಸಲು ಹೋದ ಅಮೃತಹಳ್ಳಿ ಪೊಲೀಸರ ಮೇಲೆಯೂ ಲಾಯರ್ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಹೋಗಿದ್ದ ಅಮೃತಹಳ್ಳಿ ಪೊಲೀಸರು ಸಹ ಲಾಯರ್ ರಿಂದ ಹಲ್ಲೆಗೊಳಗಾಗಿದ್ದಾರೆ. ಪರಸ್ಪರ ಎಲ್ಲರೂ ಹೊಡೆದಾಡಿ, ಬಡಿದಾಡಿಕೊಂಡಿದ್ದಾರೆ.
ಈ ಎಲ್ಲ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆರೆ ಬಳಿ ಜೂನ್ 12ರ ರಾತ್ರಿ ಬಾರ್ ವೊಂದರ ಸಮೀಪ ನಡೆದಿದೆ. ಇನ್ನು ಜೂನ್ 15ರಂದು ಲಾಯರ್ ಸುದರ್ಶನ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಲಾಯರ್ ಅಸೋಸಿಯೇಷನ್ ಅಮೃತಹಳ್ಳಿ ಪೊಲೀಸರ ವಿರುದ್ಧ ದೂರು ದಾಖಲಿಸಿದ್ದಾರೆ.
ಲಾಯರ್ ಸುದರ್ಶನ್ ರಿಂದ ಹಲ್ಲೆಗೊಳಗಾದ ವ್ಯಕ್ತಿ ರಮೇಶ್ ಸಹ ವಕೀಲ ಸುದರ್ಶನ್ ವಿರುದ್ಧ ದೂರು ದಾಖಲಿದ್ದಾರೆ. ಕಾನೂನು ಕಾಯಬೇಕಿದ್ದ ಪೊಲೀಸರು, ನ್ಯಾಯ ಕಾಯಬೇಕಿದ್ದ ವಕೀಲರು ಸಾರ್ವಜನಿಕ ಸ್ಥಳದಲ್ಲಿ ವಕೀಲರ ದುಂಡಾವರ್ತನೆ ಕೇಸ್ ಗಳು ದಾಖಲಾಗಿ, ಪ್ರಕರಣದ ಸತ್ಯಾಸತ್ಯತೆ ಹಿರಿಯ ಪೊಲೀಸ್ ಅಧಿಕಾರಿಗಳ ತನಿಖೆಯಿಂದ ಹೊರಬೀಳಬೇಕಿದೆ.
PublicNext
24/06/2022 10:10 am