ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: IPL ನಿಂದ ಹೆಚ್ಚಾಯ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ; 29 ಕೇಸ್ ನಲ್ಲಿ 33 ಆರೋಪಿಗಳು ಅರೆಸ್ಟ್!

ಬೆಂಗಳೂರು:ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡಿಸ್ತಿದ್ದ ಇಬ್ಬರನ್ನ ನಿನ್ನೆ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ.‌ಬಂಧಿತರಾದ ಆಯುಷ್ ಗುಪ್ತಾ, ಪ್ರದೀಪ್ ಯಾದವ್, ನೆದರ್ಲೆಂಡ್ಸ್‌ ಮತ್ತು ವೆಸ್ಟ್‌ ಇಂಡಿಸ್ ನಡುವಣ ಪಂದ್ಯಕ್ಕೆ ಆನ್ ಲೈನ್ ಮೂಲಕ‌ ಬೆಟ್ಟಿಂಗ್ ಆಡಿಸ್ತಿದ್ರು. ಈ ವೇಳೆ ದಾಳಿ ಮಾಡಿದ ಸಿಸಿಬಿ ಪೊಲೀಸ್ರು ಇಬ್ಬರು ಆರೋಪಿಗಳನ್ನ ಬಂಧಿಸಿ ಬಂಧಿತರಿಂದ 10.45 ಲಕ್ಷ ನಗದು ಹಾಗೂ ಮೂರು ಮೊಬೈಲ್ ಗಳನ್ನ ಸೀಜ್ ಮಾಡಿದ್ದಾರೆ.

ಇನ್ನೂ ಈ ಬಾರಿ ಐಪಿಎಲ್ ಸೀಜನ್ ವೇಳೆ ಹೆಚ್ಚಾಗಿ ಬೆಟ್ಟಿಂಗ್ ನಡೆದಿದ್ದು.ಸಿಸಿಬಿ ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್ ನಡೆಸುತಿದ್ದವರ ವಿರುದ್ದ ವಿಶೇಷ ಕಾರ್ಯಾಚರಣೆ‌ನಡೆಸಿದ್ದಾರೆ.

2022 ಐಪಿಎಲ್ ಸೀಜನ್ ನಲ್ಲಿ ಬೆಟ್ಟಿಂಗ್ ನಡೆಸುತಿದ್ದ ಒಟ್ಟು 29 ಕೇಸ್ ನಲ್ಲಿ ಈಗ 33 ಅರೋಪಿಗಳು ಅರೆಸ್ಟ್‌ ಮಾಡಿದ್ದಾರೆ.ಒಟ್ಟಾರೆಯಾಗಿ ಆರೋಪಿಗಳಿಂದ 81,45,800 ಸೀಜ್ ಮಾಡಲಾಗಿದೆ‌. ಇದ್ರಲ್ಲಿ ನಗರದ ವೆಸ್ಟ್ ಮತ್ತುಸೌತ್ ಡಿವಿಷನ್ ನಲ್ಲಿ ಅತೀ ಹೆಚ್ಚು ಬೆಟ್ಟಿಂಗ್ ನಡೆದಿದೆ. ಬಸವನಗುಡಿ ಠಾಣಾ ವ್ಯಾಪ್ತಿ ಒಂದರಲ್ಲೆ ಆರು ಪ್ರಕರಣಗಳು ಬೆಟ್ಟಿಂಗ್ ಕೇಸ್ ದಾಖಲಾಗಿದೆ.

Edited By :
Kshetra Samachara

Kshetra Samachara

02/06/2022 03:03 pm

Cinque Terre

3.65 K

Cinque Terre

0

ಸಂಬಂಧಿತ ಸುದ್ದಿ