ಆನೇಕಲ್:ಎರಡು ಅಂಗಡಿಗಳ ಬೀಗ ಜಡಿದು ಕಳ್ಳತನ ಎಸಗಿರುವ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಥಳಿ ರಸ್ತೆಯ ಲಕ್ಷ್ಮಿ ನರಸಿಂಹ ಚಿತ್ರಮಂದಿರ ಬಳಿ ನಡೆದಿದೆ.
ಆಕ್ಸಿಸ್ ಬೈಕ್ ನಲ್ಲಿ ಬಂದ ಮೂರು ಮಂದಿ ಕಳ್ಳರು ಈ ಕೃತ್ಯ ಎಸಗಿದ್ದಾರೆ .ಇನ್ನು ಕಳ್ಳರ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎಂದಿನಂತೆ ಕೆಲಸ ಮುಗಿಸಿ ರಾತ್ರಿ ಅಂಗಡಿಗೆ ಬೀಗ ಹಾಕಿಕೊಂಡು ಮನಗೆ ಹೋಗಿದ್ರು ಮಾಲೀಕರು.ಬೆಳಿಗ್ಗೆ ಬಂದು ನೋಡಿದರೆ ಅಂಗಡಿಯಲ್ಲಿ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸುಮಾರು 35 ಸಾವಿರ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಇದೀಗ ಸಾಲಸೋಲ ಮಾಡಿ ಬಂಡವಾಳ ಹಾಕಿದವರು ತಲೆ ಮೇಲೆ ಕೈ ಹಿಡಿದು ಕೂತಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ಗಸ್ತು ತಿರುಗಿ ಕಳ್ಳರಿಗೆ ಕಡಿವಾಣ ಹಾಕಬೇಕು ಅಂತ ಸ್ಥಳೀಯರ ಒತ್ತಾಯ ಮಾಡುತ್ತಿದ್ದಾರೆ.
Kshetra Samachara
01/06/2022 09:16 pm