ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೌಡಿ ಕುಳ್ಳ ರಿಜ್ವಾನ್ ಶಿಷ್ಯಂದಿರ ಹಾವಳಿ; ವೈರಲ್‌ ಆಗ್ತಿದೆ ಕ್ರೌರ್ಯ ದೃಶ್ಯಾವಳಿ!

ಬೆಂಗಳೂರು: ಒಂದು ಕಡೆ ಪೊಲೀಸ್ರ ಭಯಕ್ಕೆ ರೌಡಿ ಕುಳ್ಳ ರಿಜ್ವಾನ್ ತಲೆ ಮರೆಸಿಕೊಂಡು ಅವಿತು ಕುಳಿತಿದ್ದಾನೆ. ಆದ್ರೆ, ಇನ್ನೊಂದು ಕಡೆ ಆತನ ಪಟಾಲಂ ಮಾತ್ರ ಧಮ್ಕಿ ಹಾಕುತ್ತಾ ಕುಳ್ಳು ರಿಜ್ವಾನ್ ಹೆಸ್ರಲ್ಲಿ ದುಷ್ಕೃತ್ಯದಲ್ಲಿ ತೊಡಗಿದ್ದಾರೆ.

ಕುಳ್ಳ ರಿಜ್ವಾನ್ ಶಿಷ್ಯರಾದ ಸಂಜು ಹಾಗೂ ವೀರೂ ಗ್ಯಾಂಗ್ ನ ಕ್ರೌರ್ಯ ನೋಡಿದ್ರೆ ಶಾಕ್ ಆಗೋದು ಪಕ್ಕಾ. ಈ ಪುಂಡರು ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾಯಕರ ಮೇಲೆ ನಡೆಸಿದ ಹಲ್ಲೆಯ ದೃಶ್ಯಾವಳಿ ವೈರಲ್ ಆಗಿದೆ. ಸಿನಿಮಾ ಸ್ಟೈಲಲ್ಲಿ ಸಹಚರರನ್ನ ಕರಕೊಂಡು ಬಂದು ಯುವಕನನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹುಳಿಮಾವು ಪೆಟ್ರೋಲ್ ಬಂಕ್ ನಲ್ಲೇ ಯುವಕನ ಮೇಲೆ ಹಲ್ಲೆ ನಡೆಸಿದ್ದ ಸಂಜು & ವೀರೂ ಗ್ಯಾಂಗ್ ನ ವೀಡಿಯೊ ಇದು. ಬೆಂಗಳೂರು ಸೌತ್ ‍‍& ವೆಸ್ಟ್ ನಲ್ಲಿ ಫುಲ್ ಟೈಂ ಆಕ್ಟೀವ್ ಆಗಿದ್ದ ಈ ಕ್ರಿಮಿನಲ್ ಗ್ಯಾಂಗ್ ಈಗ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿ ಜೈಲಲ್ಲಿದ್ದಾರೆ.

ಪೊಲೀಸ್ರು‌ ಈ ಗ್ಯಾಂಗನ್ನ ಕಟ್ಟಿಹಾಕದೇ ಹೋದ್ರೆ ಸಿಟಿಯಲ್ಲಿ ಕ್ರೈಂ ರೇಟ್ ಜಾಸ್ತಿ ಆಗೋದ್ರಲ್ಲಿ ಡೌಟ್ ಇಲ್ಲ. ಈ ಸಂಜು ಮತ್ತು ವೀರೂ ರೌಡಿ ಶೀಟರ್ ಸೈಕಲ್ ರವಿ ಹತ್ಯೆಗೆ ಕಾದು ಕುಳಿತಿದ್ದಾರೆ ಅನ್ನೋ ಮಾಹಿತಿ ಇದೆ. ಇದೇ ಜೈಲಲ್ಲೇ ಸೈಕಲ್ ರವಿ ಕೂಡ ಇದ್ದು ಅಲ್ಲೂ ಎರಡೂ ಗುಂಪುಗಳು ಕತ್ತಿ ಮಸೆಯುತ್ತಿದೆ.

Edited By :
PublicNext

PublicNext

29/05/2022 01:12 pm

Cinque Terre

43.42 K

Cinque Terre

2

ಸಂಬಂಧಿತ ಸುದ್ದಿ