ಬೆಂಗಳೂರು: ಚಾಮರಾಜಪೇಟೆ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್ಮೆಂಟ್ ನಲ್ಲಿ ನಡೆದ ವೃದ್ಧ ಜುಗ್ಗುರಾಜ್ ಜೈನ್ ಕೊಲೆ ಪ್ರಕರಣ ದಾಖಲಿಸಿಕೊಂಡಿ ಚಾಮರಾಜಪೇಟೆ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.
ಮೇ 24 ರ ರಾತ್ರಿ ಮನೆಯಲ್ಲಿ ವೃದ್ಧ ಜುಗ್ಗುರಾಜ್ ನ ಮನೆ ಕೆಲಸಗಾರ ರಾಜಸ್ತಾನ ಮೂಲದ ಬಿಜೋರಾಮ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆಂದು ಶಂಕಿಸಲಾಗಿದೆ. ಇದಕ್ಕೆ ಪೂರಕವೆಂಬಂತೆ ಕೃತ್ಯ ಎಸಗಿದ ಬಳಿಕ ಮನೆಯಲ್ಲಿದ್ದ ನಗ-ನಾಣ್ಯ ದೋಚಿಕೊಂಡು ಹೋಗುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಲ್ಲದೆ ಆತನ ಎರಡು ಪೋನ್ ಗಳು ಸ್ವಿಚ್ ಆಫ್ ಮಾಡಿಕೊಂಡಿರುವುದು ತಿಳಿದು ಬಂದಿದ್ದು ಆತನೇ ದುಷ್ಕೃತ್ಯ ಎಸಗಿರುವುದು ಮೇಲ್ನೊಟಕ್ಕೆ ಸಾಬೀತಾಗಿದೆ.
ಹತ್ಯೆ ಬಳಿಕ ಮೂರು ಬ್ಯಾಗ್ ಸಮೇತ ಹೊತ್ತೊಯ್ದಿರುವ ಆರೋಪಿ ಬೆಂಗಳೂರು ಬಿಟ್ಟಿದ್ದಾನೆ. ಇನ್ನೂ ಪ್ಲಾಟ್ ನಿಂದ ನಗ ನಾಣ್ಯ ದೋಚುವಾಗ 25 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನಹ ಹೊತ್ತುಕೊಂಡು ಹೋಗಲಾಗದೆ ಬಿಜೋರಾಮ್ ಅಲ್ಲೆ ಬಿಟ್ಟು ಹೋಗಿದ್ದಾನೆ ಎಂದು ತಿಳಿದು ಬಂದಿದೆ.
Kshetra Samachara
26/05/2022 03:43 pm