ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಕಚೇರಿಗೆ ಹೋದ ಮಗ ಶವವಾಗಿ ಪತ್ತೆ: 13 ದಿನಗಳಾದ್ರೂ ನಿಗೂಢವಾಗಿಯೇ ಉಳಿದ ಸಾವಿನ ರಹಸ್ಯ

ದೊಡ್ಡಬಳ್ಳಾಪುರ : ತಹಶೀಲ್ದಾರ್ ಕಚೇರಿಗೆ ಹೋಗಿ ಬರೋದಾಗಿ ಹೇಳಿದ ಮಗ ಮನೆಗೆ ವಾಪಾಸ್ ಬರಲಿಲ್ಲ.. ಮರುದಿನ ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ಹೆಣವಾಗಿ ಬಿದ್ದಿದ್ದ. ಮೇಲ್ನೋಟಕ್ಕೆ ಮೆಟ್ಟಿಲಿನಿಂದ ಬಿದ್ದು ಸಾವನ್ನಪ್ಪಿರುವುದಾಗಿ ಕಂಡುಬಂದಿದ್ರೂ, ಆತನ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಹುಟ್ಟಿದೆ. ಇನ್ನು ಮಗ ಸತ್ತು 13 ದಿನ ಕಳೆದ್ರೂ ಸಾವಿನ ರಹಸ್ಯ ಬಯಲಾಗಿಲ್ಲ. ಹೀಗಾಗಿ ಪ್ರಕರಣ ಭೇದಿಸಿ ಮಗನ ಸಾವಿನ ರಹಸ್ಯ ಬಯಲು ಮಾಡುವಂತೆ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ನಾಲ್ಕು ಹೆಣ್ಣು ಮಕ್ಕಳ ನಂತರ ಹುಟ್ಟಿದ ಕಿರಿಯ ಪುತ್ರ, ಮನೆಮಂದಿಗೆಲ್ಲ ಮುದ್ದಿನ ಹುಡುಗನಾಗಿದ್ದ ಹರೀಶ್ ಕುಮಾರನ ಸಾವು ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿದೆ. ದೊಡ್ಡಬಳ್ಳಾಪುರ ನಗರದ ಕುಚ್ಚಪ್ಪನಪೇಟೆಯ ರಂಗರಾಜು ಮತ್ತು ಸುಶೀಲಮ್ಮ ದಂಪತಿಯ ಕೊನೆಯ ಮಗನೇ ಈ ಹರೀಶ್ ಕುಮಾರ್. ವಕೀಲರಾದ ಕೃಷ್ಣಮೂರ್ತಿಯವರ ಬಳಿ ಕ್ಲರ್ಕ್ ಕೆಲಸ ಮಾಡಿಕೊಂಡಿದ್ದ ಹರೀಶ್ ತನ್ನ ಶಾಂತ ಸ್ವಭಾವದಿಂದ ಎಲ್ಲರಿಗೂ ಆಪ್ತ ಸ್ನೇಹಿತನಾಗಿದ್ದ. ಮೇ 10 ರ ಸಂಜೆ 5 ಗಂಟೆಯ ಸಮಯದಲ್ಲಿ ತಹಶೀಲ್ದಾರ್ ಕಚೇರಿಗೆ ಹೋಗುವುದಾಗಿ ಹೇಳಿ ಹೋದ ಹರೀಶ್ ಕುಮಾರ್ ರಾತ್ರಿ 7 ಗಂಟೆಗೆ ಮನೆಯವರೊಂದಿಗೆ ಮಾತನಾಡಿದ್ದೇ ಅವನ ಕೊನೆಯ ಮಾತುಗಳು. ಮರುದಿನ ಬೆಳಗ್ಗೆ ಸುಭಾಷ್ ನಗರದ ಕಟ್ಟುತ್ತಿರುವ ಮನೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದ.

ಇನ್ನು ಹರೀಶ್ ಸಾವಿನ ಸುತ್ತ ಅನುಮಾನದ ಹುತ್ತವೇ ಬೆಳೆದಿದೆ. ತನಿಖೆಯಲ್ಲೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಮಗನ ಸಾವಿಗೆ ಕಾರಣ ಏನು ಅನ್ನೋದನ್ನ ತಿಳಿಸಿ ಅಂತ ತಾಯಿ ಕಣ್ಣೀರು ಹಾಕುವ ದೃಶ್ಯ ಮನಕಲಕುವಂತಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. FSL ವರದಿ ಬಂದ ನಂತರವೇ ಸಾವಿನ ರಹಸ್ಯ ಬಯಲಾಗಲಿದೆ. ಆದರೆ FSL ವರದಿ ಕೈ ಸೇರಲು ಒಂದು ತಿಂಗಳಾಗುತ್ತೆ ಎಂಬುದು ಪೊಲೀಸರ ವಾದ. ಅದೇನೇ ಇರ್ಲಿ ಮಗನನ್ನ ಕಳೆದುಕೊಂಡಿರುವ ತಾಯಿಗೆ ಮಗನ ಸಾವಿನ ಕಾರಣ ಗೊತ್ತಾದ್ರೆ ಆ ಹಿರಿಯ ಜೀವಕ್ಕೆ ಕೊಂಚ ನೆಮ್ಮದಿ ಸಿಗಬಹುದು.

Edited By :
Kshetra Samachara

Kshetra Samachara

23/05/2022 08:23 pm

Cinque Terre

4.3 K

Cinque Terre

0

ಸಂಬಂಧಿತ ಸುದ್ದಿ