ಯಲಹಂಕ: ಬೆಂಗಳೂರಿನಲ್ಲಿ ಖಾಲಿ ಸೈಟ್ ಗುರ್ತಿಸಿ ಮಾಲೀಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಲಾಗ್ತಿತ್ತು. ಹೀಗೆ ಅಕ್ರಮವಾಗಿ ಸಂಪಾದನೆ ಮಾಡ್ತಿದ್ದ 5 ಜನ ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಸುವರ್ಣಮ್ಮರ ದೂರಿನ ಮೇರೆಗೆ ಕಬೀರ್ ಆಲಿ, ಫೈಜ್ ಸುಲ್ತಾನ್, ಕಲ್ಪನಾ, ಯೋಗೇಶ್ & ಪೂಜಾರನ್ನ ಬಂಧಿಸಿ ಜೈಲಿಗಟ್ಟಲಾಗಿದೆ. ಇವರಿಂದ 102 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಟಾಟ ಸಫಾರಿ ಕಾರನ್ನ ಜಪ್ತಿ ಮಾಡಲಾಗಿದೆ.
ಸುವರ್ಣಮ್ಮನಿಗೆ 1988 ರಲ್ಲಿ HMT ಲೇಔಟ್‌ನಲ್ಲಿ ಸೈಟ್ ಹಂಚಿಕೆ ಆಗಿತ್ತು. ಇದರ ಕ್ರಯಪತ್ರ ಸಹ ಮಾಡಿಸಿಕೊಂಡಿದ್ದರು. ಕೆಲವು ವರ್ಷಗಳ ನಂತರ ಸೈಟ್ ಬಳಿ ತೆರಳಿದಾಗ ತನ್ನ ಹೆಸರಿನ ಮೂಲಕವೇ ಸೈಟ್ ಮಾರಿ ವಂಚಿಸಲಾಗಿತ್ತು. ಈ ಸಂಬಂಧ ವಿದ್ಯಾರಣ್ಯಪುರ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಈ ವೇಳೆ ಆರೋಪಿ RT.ನಗರದ ಕಬೀರ್ ಆಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ಖಾಲಿ ಇರೊ ಸೈಟ್ ಗುರ್ತಿಸಿ, ಸೈಟ್ ಮಾಹಿತಿ ವಿವರ, ಪಡೆದುಕೊಳ್ತಿದ್ದ. ಅದೇ ರೀತಿ ಸುವರ್ಣಮ್ಮನ ಸೈಟ್ ದಾಖಲೆ ನಕಲಿ ಮಾಡಿ, ನಕಲಿ ಮಗಳು ಕಲ್ಪನಾಗೆ ದಾನ ಮಾಡಲಾಗಿತ್ತು. ನಂತರ ನಕಲಿ ಗಂಡ ಯೋಗೇಶ್ ಸೈಟ್ ಹಸ್ತಾಂತರಿಸಿದ್ದ. ಕೆಲ ದಿನದ ಬಳಿಕ ಆರೋಪಿ ಯೊಗೇಶ್ ವೆಂಕಟಸ್ವಾಮಿಗೆ 65ಲಕ್ಷಕ್ಕೆ ಮಾರಾಟ ಮಾಡಿದ್ದರು.
ಮೋಸದ ಹಣದಲ್ಲಿ ಕಬೀರ್, ಫೈಜ್ ಸುಲ್ತಾನ ಎಂಜಾಯ್ ಮಾಡಿದ್ದರು. ಪದವೀಧರೆ ಆಗಿದ್ದ ಪೈಜ್ ಸುಲ್ತಾನ್ ವಂಚನೆ ಪ್ರಕರಣದ ಪ್ರಮುಖ ಆರೋಪಿ. ಗಂಡನನ್ನು ಬಿಟ್ಟು ಕಬೀರ್ ಜೊತೆ ಸೇರಿ ದಾರಿ ತಪ್ಪಿದ್ಳು. ಸಂಜಯನಗರ ಠಾಣೆಯಲ್ಲಿ ಇದೇ ರೀತಿ ವಂಚನೆ ಪ್ರಕರಣ ದಾಖಲಾಗಿ ಇವರ ವಿರುದ್ಧ ತನಿಖೆ ನಡಿತಿದೆ.
Kshetra Samachara
21/05/2022 01:29 pm