ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಸ್ಪೀಟ್ ಆಟಕ್ಕಾಗಿ 30 ಲಕ್ಷ ಸಾಲ: ಸಾಲಗಾರರ ಕಾಟಕ್ಕೆ ಬೇಸತ್ತು ಚಿಕ್ಕಮ್ಮನ ಮನೆಗೇ ಕನ್ನ

ಬೆಂಗಳೂರು: ಇಸ್ಪೀಟ್ ಆಟದ ಚಟಕ್ಕೆ ಬಿದ್ರೆ ಅದ್ರಿಂದ ಹೊರಬರೋದು ತುಂಬಾ ಕಷ್ಟ. ಮನೆ ಮಠ ಕಳ್ಕೊಂಡ್ರೂ ಬುದ್ಧಿ ಕಲಿಯದ ಇವ್ರು ಹಣಕ್ಕಾಗಿ ಎಂಥಹ ಕೆಲಸಕ್ಕಾದ್ರೂ ಕೈ ಹಾಕ್ತಾರೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಗ್ಸಾಂಪಲ್..ನಿತ್ಯ ಇಸ್ಪೀಟ್ ಆಡೋಕೆ ಮಾದನಾಯಕನಹಳ್ಳಿ ಮನೆಯಿಂದ ಸೋಲೂರಿನ ಅಡ್ಡೆಗೆ ಹೋಗ್ತಿದ್ದ ಅಜಿತ್ ಕಳೆದ ಒಂದು ವರ್ಷದಿಂದ ಇಸ್ಪೀಟ್ ನಲ್ಲಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ. ಜೂಜಲ್ಲಿ ಕಳೆದುಕೊಂಡ ಹಣವನ್ನು ಜೂಜಾಟದಲ್ಲೇ ಸಂಪಾದನೆ ಮಾಡಬೇಕು ಅಂತ ಅಂದುಕೊಂಡಿದ್ದ ಅಜಿತ್ ಇದೇ ಇಸ್ಪೀಟ್ ಆಟಕ್ಕೆ ಮೂವತ್ತು ಲಕ್ಷ ಸಾಲ‌ ಮಾಡಿಕೊಂಡಿದ್ದ. ಕೊನೆಗೆ ಸಾಲ ತೀರಿಸೋಕೆ ಆಗ್ದೇ ಚಿಕ್ಕಮ್ಮನ ಮನೆಗೇ ಕನ್ನ ಹಾಕ್ಬಿಟ್ಟ. ಚಿಕ್ಕಮ್ಮನ ಮನೆಯಲ್ಲಿದ್ದ 600 ಗ್ರಾಂ. ಚಿನ್ನ ಕದ್ದು ಸೋಲೂರಿನಲ್ಲೇ ಅಡವಿಟ್ಟು ಹಣ ಪಡೆದಿದ್ದ.

ಮನೆಗಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಅಂಡ್ ಟೀಂ ಕೊನೆಗೂ ಅಜಿತ್ ನನ್ನ ಬಂಧಿಸಿ ಚಿನ್ನ ವಸಪಡಿಸಿಕೊಂಡಿದ್ದಾರೆ.

ಇನ್ನೂ ಅಜಿತ್ ಜೊತೆಗೆ ಅನ್ವರ್ ಪಾಷಾ ಎಂಬ ಮತ್ತೊಬ್ಬನನ್ನ ಪ್ರತ್ಯೇಕ ಮನಗಳ್ಳತನ ಪ್ರಕರಣದಲ್ಲಿ ಬಂಧಿಸಿದ್ದು ಆತನಿಂದಲೂ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಸೀಜ್ ಮಾಡಿದ್ದಾರೆ. ಒಟ್ಟಿನಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಿ 60 ಲಕ್ಷ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿದ್ದಾರೆ.

ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

21/05/2022 08:09 am

Cinque Terre

46.58 K

Cinque Terre

0