ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Bwssb ನಿರ್ಲಕ್ಷ್ಯಕ್ಕೆ ಇಬ್ಬರು ಕಾರ್ಮಿಕರ ಬಲಿ ಕೇಸ್ : ನಿರ್ಲಕ್ಷ್ಯ ತೋರಿದ ಆರೋಪ ನಾಲ್ವರ ಬಂಧನ

ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳು ಮುಖ್ಯರಸ್ತೆಯಲ್ಲಿ bwssb ನಿರ್ಲ್ಯಕ್ಷಕ್ಕೆ ಇಬ್ಬರು ಕಾರ್ಮಿಕರು ಮೃತ ಪಟ್ಟಿದ್ರು.

ಪೈಪ್ ಲೇನ್ ಅಳವಡಿಕೆ ವೇಳೆ ಮಳೆ ಸುರಿದ ಪರಿಣಾಮ ನೀರು ನುಗ್ಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ರು. ಈ ಸಂಬಂಧ ಸುರಕ್ಷತಾ ಕ್ರಮಅನುಸರಿಸದ ಗುತ್ತಿಗೆದಾರರು ಸೇರಿ ನಾಲ್ವರ ಮೇಲೆ ಎಫ್ ಐ ಆರ್ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ಉಲ್ಲಾಳದ ಬಿಡಿಎ ರಸ್ತೆಯಲ್ಲಿ ಕಾರ್ಮಿಕರು ಕೆಲಸ ಮಾಡುವಾಗ ಪೈಪ್ ನಲ್ಲಿ ನೀರು ನುಗ್ಗಿದೆ.ಇದರಿಂದ ಹೊರಬರಲಾಗದೆ ಉಸಿರುಗಟ್ಟಿ ಬಿಹಾರ ಮೂಲದ ದೇವ್ ಬಾತ್ ಹಾಗೂ ಉತ್ತರಪ್ರದೇಶದ ಅಂಕಿತ್ ಕುಮಾರ್ ಇಬ್ಬರು ಸಾವನ್ನಪ್ಪಿದ್ದರು. ಘಟನೆ ಸಂಬಂಧ ಪ್ರಾಜೆಕ್ಟ್ ಮ್ಯಾನೇಜರ್ ಶಿವಕುಮಾರ್, ಸೈಟ್ ಇಂಜಿನಿಯರ್ ಹರೀಶ್ ರೆಡ್ಡಿ, ಎಚ್ ಆರ್ ಮ್ಯಾನೇಜರ್ ನರಸಿಂಹರಾಜು ಹಾಗೂ ಕಾರ್ಮಿಕರನ್ನು ಸರಬರಾಜು ಮಾಡುವ ಮನೋಜ್ ಯಾದವ್ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

18/05/2022 11:07 pm

Cinque Terre

3.62 K

Cinque Terre

0

ಸಂಬಂಧಿತ ಸುದ್ದಿ