ಬೆಂಗಳೂರು: ಐಟಿಐ ಓದಿದ್ದ ಆತ ಜೆರಾಕ್ಸ್ ಕೆಲಸ ಮಾಡ್ಕೊಂಡು ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇದ್ದಿದ್ರೆ ಚೆನ್ನಾಗಿರ್ತಿದ್ದ. ಆದ್ರೆ ಮಾಡಬಾರು ಮಾಡಿ ಸದ್ಯ ರಾಜಾಜಿನಗರ ಪೊಲೀಸ್ರ ಅತಿಥಿಯಾಗಿದ್ದಾನೆ.
ಇವ್ರ ಹೆಸ್ರು ಸಚಿನ್ ಹಾಗೂ ಜಯಂತ್ ಬಾಪೂಜಿನಗರದವ್ರು. ಹಣದ ಆಸೆಗೆ ಬಿದ್ದು ಆರ್ ಟಿ ಓ ಸಿಬ್ಬಂದಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ದರೋಡೆ ಮಾಡಿ ಎಸ್ಕೇಪ್ ಆಗಿದ್ರು. ಎಸ್ಕೇಪ್ ಆಗಿ ಬಿಂದಾಸ್ ಆಗಿ ಇರ್ಬೋದು ಅಂದುಕೊಂಡಿದ್ದ ಆರೋಪಿಗಳನ್ನ ರಾಜಾಜಿನಗರ ಇನ್ಸ್ಪೆಕ್ಟರ್ ಅಶೋಕ್ ಅಂಡ್ ಟೀಂ ಬಂಧಿಸಿದ್ದಾರೆ.
ಏಪ್ರೀಲ್ 21ರಂದು ರಾಜಾಜಿನಗರ ಆರ್ ಟಿ ಓ ಕಚೇರಿಯಲ್ಲಿ ಸಂಗ್ರಹವಾಗಿದ್ದ, 5 ಲಕ್ಷ ಹಣವನ್ನ ಬ್ಯಾಗ್ ನಲ್ಲಿ ಇಟ್ಟಕೊಂಡು ಆರ್ ಟಿ ಓ ಸಿಬ್ಬಂದಿ ಮಂಜುನಾಥ, ಮಧ್ಯಾಹ್ನ 2.45ರ ಸುಮಾರು ಪಕ್ಕದಲ್ಲಿದ್ದ ಕೆನರಾ ಬ್ಯಾಂಕ್ ಗೆ ಹಣ ಜಮಾವಣೆ ಮಾಡಲು ನಡೆದುಕೊಂಡು ಹೋಗುತ್ತಿದ್ದರು, ಇದೇವೇಳೆ ಹೆಲ್ಮೆಟ್ ಧರಿಸಿಕೊಂಡು ಬೈಕ್ ನಲ್ಲಿ ಹಿಂದಿನಿಂದ ಬಂದ ಸಚಿನ್ ಮತ್ತು ಜಯಂತ್ ಹಣದ ಬ್ಯಾಗನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದರು.
ಆರೋಪಿಗಳ ವಿರುದ್ದ ದೂರು ದಾಖಲಿಸಿದ್ದ ಆರ್ ಟಿ ಓ ಸಿಬ್ಬಂದಿ, ದೂರು ದಾಖಲಿಸಿಕೊಳ್ಳುತ್ತಿದಂತೆ ಪೊಲೀಸ್ರು ಸಿಸಿಟಿವಿ ಆಧಾರಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರು ವರ್ಷಗಳಿಂದ ಆರ್ ಟಿಓ ಕಚೇರಿಯ ಪಾರ್ಟ್ ಒನ್ ಶಾಫ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಸಚಿನ್. ಶಾಫ್ ನಲ್ಲಿ ಸಂಗ್ರಹವಾಗಿದ್ದ ಹಣವನ್ನು ಆರ್ ಟಿಓ ಕಚೇರಿಗೆ ಕಟ್ಟಲು ಹೋಗುತ್ತಿದ್ದ. ಆದ್ರೆ ಹಣದ ವಿಚಾರವಾಗಿ ಶಾಪ್ ಮಾಲೀಕನ ಜೊತೆ ಗಲಾಟೆ ಮಾಡಿ ಕೆಲಸ ಬಿಟ್ಟಿದ್ದ, ಮಾಡಿರೋ ಸಾಲವನ್ನು ತಿರಿಸಲು ದರೋಡೆಗೆ ಪ್ಲಾನ್ ಹಾಕಿದ, ದರೋಡೆ ಮಾಡಲು ಒಂದು ತಿಂಗಳ ಹಿಂದೆ ಪ್ಲಾನ್ ಮಾಡಿಕೊಂಡಿದ್ದ, ಮೂರು ದಿನಗಳಿಂದ ಸಿಬ್ಬಂದಿ ಬ್ಯಾಂಕ್ ಗೆ ಹೋಗಿ ಬರುವದನ್ನು ಗಮನಿಸಿದ್ದ ಸಚಿನ್, ಪ್ಲಾನ್ ಪ್ರಕಾರ ಹಣ ಕಟ್ಟಲು ಹೋಗುತ್ತಿದ್ದ ಸಿಬ್ಬಂದಿಯನ್ನು ಅಡ್ಡಗಟ್ಟಿ ಕೈಯಲ್ಲಿದ್ದ ಹಣದ ಬ್ಯಾಗ್ ಕಿತ್ತು ಪರಾರಿಯಾಗಿದ್ರು.
ಇನ್ನು ಬಂಧಿತ ಆರೋಪಿಗಳಿಂದ 2.52 ಲಕ್ಷ ಹಣ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.
PublicNext
29/04/2022 08:03 pm