ಬೆಂಗಳೂರು: ಆತನಿಗೆ ವಿಪರೀತ ಕುಡಿಯುವ ಚಟ. ಇಂದು ಬೆಳಿಗ್ಗೆಯೇ ಎರಡು ಪೆಗ್ ಏರಿಸಿಕೊಂಡಿದ್ದ. ಇದರ ಜೊತೆಗೆ ಮನೆಯಲ್ಲೊಂದು ಸಣ್ಣ ಫ್ಯಾಮಿಲಿ ಕಿರಿಕ್ ಕೂಡ ಆಗಿತ್ತು. ಇದೆಲ್ಲದರ ಪರಿಣಾಮವಾಗಿ ಮಗನ ಸಿಂಗಲ್ ಬ್ಯಾರೆಲ್ ಗನ್‌ನಿಂದ ಫೈರ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಕಾಫಿ ಬೋರ್ಡ್ ಲೇಔಟ್‌ನಲ್ಲಿ ಇಂದು ಮಧ್ಯಾಹ್ನ ಸುಮಾರು ೧೨ ಗಂಟೆಗೆ ಗುಂಡಿನ ಸದ್ದು ಕೇಳಿ ಬಂದಿದೆ. ಏನಾಯ್ತು ಅಂತ ಅಕ್ಕಪಕ್ಕದ ಮನೆಯವರು ಗಾಬರಿಯಾಗಿ ಹೋಗಿ ನೋಡಿದ್ರೆ, ಮನೆಯ ಒಡೆಯ ಆತ್ಮಹತ್ಯೆ ಮಾಡಿಕೊಂಡಿದ್ದ. ಕೊಡಗು ಮೂಲದ ಬಿಡ್ಡಪ್ಪ ಎಲ್ & ಟಿ ಕಂಪನಿಯ ನಿವೃತ್ತ ಉದ್ಯೋಗಿ. ರಿಟೈರ್ಡ್ ಲೈಫ್ ಅಂದ್ರೆ ಕೇಳ್ಬೇಕಾ? ಬೆಳಗ್ಗೆ ತಿಂಡಿ ತಿಂದಾದ್ಮೇಲೆ ಎರಡು ಪೆಗ್ ಏರಿಸಿಯೇ ಬಿಡ್ತಿದ್ದರಂತೆ. ಎಂದಿನಂತೆ ಇಂದೂ ಸಹ ಬಿಡ್ಡಪ್ಪ ಪೆಗ್ ಹಾಕಿದ್ದಾರೆ. ಅದು ಸ್ವಲ್ಪ ಜಾಸ್ತಿನೇ ಆಗಿತ್ತು. ಪೆಗ್ ಜಾಸ್ತಿ ಹಾಕಿದ ಸಮಯದಲ್ಲೇ ಮನೆಯಲ್ಲಿ ನಡೆದ ಸಣ್ಣದೊಂದು ಕಿರಿಕ್ ಇಂದು ಬಿಡ್ಡಪ್ಪ ಆತ್ಮಹತ್ಯೆಗೆ ಕಾರಣವಾಗಿದೆ.
ಇನ್ನೂ ವಿಷಯ ತಿಳಿಯುತ್ತಿದ್ದಂತೆ ಅಮೃತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ರವಾನಿಸಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
28/04/2022 10:52 pm