ಬೆಂಗಳೂರು: ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದ ವ್ಯಕ್ತಿಯನ್ನು ಹಾಡಹಾಗಲೇ ಮನೆಗೆ ನುಗ್ಗಿದ ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇಂದು ಮಧ್ಯಾಹ್ನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
35 ವರ್ಷದ ಸುರೇಶ್ ಕೊಲೆಯಾದ ದುದೈರ್ವಿಯಾಗಿದ್ದು, ದೊಮ್ಮಲೂರಿನ ಗೌತಮ್ ನಗರದಲ್ಲಿ ವಾಸವಾಗಿದ್ದರು. ಇಂದು ಮಧ್ಯಾಹ್ನ ಮನೆಯಲ್ಲಿರುವಾಗ ಆರೋಪಿಗಳು ಮನೆಯ ಹಿಂಬಾಗಿಲಿನಿಂದ ಬಂದಿದ್ದಾರೆ. ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ.
ಕೊಲೆ ನಂತರ ಖಾರದಪುಡಿ ಎರಚಿ ಆಗುಂತಕರು ಎಸ್ಕೇಪ್ ಆಗಿದ್ದಾರೆ.ಆಸ್ತಿ ವಿಚಾರಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಸುರೇಶ್ ಸಹೋದರ ಹಾಗೂ ಸಹೋದರಿಯರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪ್ರತಿ ನಿತ್ಯ ಸುರೇಶ್ ಹಾಗೂ ಸಹೋದರರ ನಡುವೆ ಗಲಾಟೆಯಾಗುತಿತ್ತು ಎಂದು ತಿಳಿದು ಬಂದಿದೆ.ಸುರೇಶ್ ತಾಯಿ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ತಾಯಿ ಹೆಸರಿನಲ್ಲಿ ಆಸ್ತಿಯಿದೆ. ಇದು ಎಲ್ಲರಿಗೂ ಸೇರಿದ್ದು ಎಂದು ಗಲಾಟೆ ಆಗಿತ್ತು ಎಂದು ಮೃತನ ಸಂಬಂಧಿಕರಾದ ಕವಿತಾ ತಿಳಿಸಿದ್ದಾರೆ.
ಸದ್ಯ ಘಟನೆ ಕುರಿತು ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದು ವರಿಸಿದ್ದಾರೆ.
PublicNext
13/04/2022 10:03 pm