ಬೆಂಗಳೂರು: ಶಾಲೆಯಲ್ಲಿ ಬಾಂಬ್ ಇಟ್ಟಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿ ತಿಳಿಸಿದ್ದಾರೆ. ಇದರಿಂದಾಗಿ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರ ರಾವ್, "ನಗರದಲ್ಲಿ 6ರಿಂದ 7 ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಈ ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ಕೂಡಲೇ ಸ್ಥಳೀಯ ಪೊಲೀಸರು ಆ್ಯಕ್ಷನ್‌ಗೆ ಇಳಿದಿದ್ದಾರೆ. ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಕೂಡ ಕೆಲಸ ಮಾಡಿವೆ. ಬೆಳಗ್ಗೆಯಿಂದ ನಿರಂತರವಾಗಿ ಚೆಕ್ ಮಾಡಲಾಗುತ್ತಿದೆ. ಇಲ್ಲಿಯರೆಗೂ ಯಾವುದೇ ಬೇರೆ ತರಹದ ಬೆದರಿಕೆ ಕಂಡು ಬಂದಿಲ್ಲ. ಪರೀಕ್ಷೆ ಸಮಯದಲ್ಲಿ ಇಂಥ ಕರೆಗಳು ಬರುತ್ತಿರುತ್ತವೆ. ಮಕ್ಕಳಾಗಲಿ, ಪೋಷಕರಾಗಲಿ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಿಂದ ಸಂದೇಶ ಬಂದಿವೆ ಎಂದು ತನಿಖೆ ಮಾಡುತ್ತಿದ್ದೇವೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದು, ಪತ್ತೆ ಹಚ್ಚುವ ಕಾರ್ಯದಲ್ಲಿದ್ದೇವೆ. ಬೇರೆ-ಬೇರೆ ಇಮೇಲ್ ಕ್ರಿಯೇಟ್ ಮಾಡಿ ಮೇಸೆಜ್ ಮಾಡಿದ್ದಾರೆ. ಅಲ್ಲದೆ ಬೇರೆ ಬೇರೆ ಸಮಯದಲ್ಲಿ ಮೆಸೇಜ್ ಮಾಡಿದ್ದಾರೆ. ಇನ್ನೂ ಯಾರು ಅಂತ ಪತ್ತೆಯಾಗಿಲ್ಲ. ಡಿಸಿಪಿ ಈಸ್ಟ್ ಹಾಗೂ ಡಿಸಿಪಿ ವೈಟ್ ಫೀಲ್ಡ್ ವಿಭಾಗ ಎರಡು ತಂಡ ರಚಿಸಲಾಗಿದೆ. ಜೊತೆಗೆ ಸ್ಕ್ವಾಡ್ ಟೀಂ ಕೂಡ ಅದರ ಕೆಲಸ ಮಾಡುತ್ತಿದೆ. ಇಂದು ಎಲ್ಲಾ ಕಡೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇತ್ತು. ಆದರೆ ಎಕ್ಸಾಂಗೆ ಯಾವುದೇ ತೊಡಕ್ಕಾಗಿಲ್ಲ. ಹೀಗಾಗಿ ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
PublicNext
08/04/2022 04:51 pm