ಬೆಂಗಳೂರು: ಕೆಲವೊಮ್ಮೆ ನಮ್ಮ ಸಣ್ಣ ಪುಟ್ಟ ಅಜಾಗರುಕತೆ ಕಳ್ಳರಿಗೆ ಹೇಗೆ ವರದಾನವಾಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿ. ಹೌದು ಮನೆ ಬಿಟ್ಟು ಟ್ರಿಪ್ ಹೋಗುವ ಮುನ್ನ ಹಾಲು ಪೇಪರ್ ಬಂದ್ ಮಾಡ್ಸಿ, ಎರಡು ದಿನ ಹಾಲು ಪೇಪರ್ ಮನೆ ಬಾಗಿಲಲ್ಲಿ ಇದ್ರೆ ಕಳ್ಳರು ನಿಮ್ಮ ಮನೆಗೆ ಕನ್ನ ಹಾಕೋದು ಪಕ್ಕ.ಈ ವಿಚಾರ ಯಾಕೆ ಪ್ರಸ್ತಾಪ ಅಂತೀರಾ ಈ ಸ್ಟೋರಿ ನೋಡಿ.
ಈ ಪೊಟೋದಲ್ಲಿ ಕಾಣ್ತಿದ್ದರಲ್ಲಾ ಇವರ ಹೆಸರು ಹರಿದಾಸ್ ಬರಾಯಿ, ಪಾರ್ಥ ಹಲ್ದಾರ್ ಮತ್ತು ರತನ್ ಇವರು ಒಂಥರ ಹೈ ಫೈ ಕಳ್ಳರು. ದೂರದ ವೆಸ್ಟ್ ಬೆಂಗಾಳದಿಂದ ಪ್ಲೈಟ್ ನಲ್ಲಿ ನಗರಕ್ಕೆ ಬಂದು ಕಳ್ಳತನಮಾಡಿ ಎಸ್ಕೇಪ್ ಆಗ್ತಾರೆ. ಅದು ಕೂಡ ಇಸ್ಪೀಟ್ ಗೆ ಹಣಹೊಂದಿಸಲು ಕಂಡವರ ಮನೆ ಬೀಗ ಮುರಿತಿದ್ದ ಚಾಲಾಕಿಗಳು ಇವರು. ದುಡ್ಡು ಕಡಿಮೆಯಾದ್ರೆ ಸಾಕು ವಾರಕ್ಕೊಮ್ಮೆ ಅಥಾವ ತಿಂಗಳಿಗೊಮ್ಮೆ ಅಂತರ್ ರಾಜ್ಯಕ್ಕೆ ವಿಮಾನದಲ್ಲಿ ಹಾರಿ ಬರ್ತಿದ್ರು. ಮೂರ್ನಾಲ್ಕು ದಿನದಲ್ಲಿ ಕ್ಳಳತನ ಮಾಡಿ ಎಸ್ಕೇಪ್ ಆಗ್ತಿದ್ರೂ.
ಹೌದು, ಈ ಗ್ಯಾಂಗ್ ಕಳ್ಳತನ ಮಾಡುವ ಮೊದಲು ಮನೆ ಮುಂದೆ ಹಾಲು ಮತ್ತು ಪೇಪರ್ ಗಳು ಇರ್ತಾವ ಅಂತ ನೋಡ್ತಿದ್ರು. ಹಾಲು ಪೇಪರ್ ಬಾಗಿಲಲ್ಲೇ ಇದ್ದರೆ ಈ ಮನೆಯಲ್ಲಿ ಯಾರು ಇಲ್ಲ ಅನ್ನೋದು ಅವರಿಗೆ ಪಕ್ಕಾ ಅಗ್ತಿತ್ತು. ಅನಂತರ ಸ್ಕೇಚ್ ಹಾಕಿ ಆ ಮನೆಯಲ್ಲಿದ್ದ ಚಿನ್ನಾಭರಣ ದೋಚುತ್ತಿದ್ರು. ಕಳೆದ ತಿಂಗಳು ಕೂಡ ಜ್ಯೋತಿ ಅನ್ನೋವರ ಮನೆಯಲ್ಲಿ ಎರಡು ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ರು.
ಇವರ ಬೆನ್ನತ್ತಿದ್ದ ಬಾನಸವಾಡಿ ಇನ್ಸ್ಪೆಕ್ಟರ್ ಸತೀಶ್. ಪಿಎಸ್ ಐ ಶಹಜನ್ ಜೊತೆ ಒಂದು ಟೀಂ ಮಾಡಿ ವೆಸ್ಟ್ ಬೆಂಗಾಲ್ ಗೆ ಕಳುಹಿಸಿಲಾಗಿತ್ತು.ಪೊಲೀಸ್ರು
13ದಿನ ಅಲ್ಲೆ ವಾಸ್ತವ್ಯ ಹೂಡಿ ಮೂವರನ್ನ ಬಂಧಿಸಿ ಸದ್ಯ 750ಗ್ರಾಂ ಚಿನ್ನವನ್ನ ರಿಕವರಿ ಮಾಡಿದ್ದಾರೆ.
ವಿಚಾರಣೆ ವೇಳೆ ಹೈದ್ರಾಬಾದ್, ಸಿಕ್ಕಿಂದರಬಾದ್, ಮುಂಬೈ ಮತ್ತು ಬೆಂಗಳೂರಿನಲ್ಲೂ ಕಳ್ಳತನ ಮಾಡಿರೋದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಪತ್ತೆಕಾರ್ಯ ಮುಂದುವರಿದಿದೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
18/03/2022 06:23 pm