ಬೆಂಗಳೂರು: ಸಿಸಿಬಿಯಲ್ಲಿ ಮಾಸ್ ಟ್ರಾನ್ಸ್ ಫರ್ ಗೆ ಮುಂದಾಗಿದ್ದಾರೆ ಸಿಸಿಬಿ ಜಂಟಿ ಆಯುಕ್ತ ರಮಣ್ ಗುಪ್ತಾ. ದೇಶದಲ್ಲೇ ಸದ್ದು ಮಾಡಿದ್ದ ಬಿಟ್ ಕಾಯಿನ್ ಎಫೆಕ್ಟ್ ಕೆಳ ಹಂತದ ಪೊಲೀಸ್ರಿಗೂ ತಟ್ಟಿದೆ ಅಂತ ಹೇಳಲಾಗ್ತಿದೆ. ಸಿಸಿಬಿಯಲ್ಲಿ ತನಿಖೆಯಾಗಿದ್ದ ಬಿಟ್ ಕಾಯಿನ್ ಹಗರಣ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಸದ್ಯ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ವರ್ಗಾವಣೆಯಾಗ್ತಿದ್ದಂತೆಯೇ ಸಿಸಿಬಿ ಬಹುತೇಕ ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ.
ಎಎಸ್ ಐ, ಹೆಚ್ ಸಿ, ಪಿಸಿಗಳ ಎತ್ತಂಗಡಿ ಮಾಡಿ ಇಲಾಖೆ ಆದೇಶ ಹೊರಡಿಸಿದೆ. ಸಿಸಿಬಿ ಜಂಟಿ ಆಯುಕ್ತರಾಗಿ ರಮಣ್ ಗುಪ್ತಾ ನೇಮಕ ಆದ ಮೇಲೆ ಹಿಂದೆ ಬಿಟ್ ಕಾಯಿನ್ ಸಮಯದಲ್ಲಿ ಕೆಲಸ ಮಾಡಿದ್ದ ಎಲ್ಲ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿಸಿದ್ದಾರೆ ಎಂದು ಹೇಳಲಾಗ್ತಿದೆ.
ಇನ್ನು, ಸಿಸಿಬಿಯಲ್ಲಿನ ಈ ಮಾಸ್ ಟ್ರಾನ್ಸ್ ಫರ್ ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಸಿಸಿಬಿಯಲ್ಲಿ ಕೆಲಸ ಮಾಡಬೇಕಾದ್ರೆ ಒಂದು ಅನುಭವ ಮತ್ತು ನಗರದ ಮಾಹಿತಿ ಅತ್ಯಗತ್ಯ. ಆದ್ರೆ, ಏಕಾಏಕಿ ಎಲ್ಲ ಸಿಬ್ಬಂದಿ ವರ್ಗಾವಣೆಯಿಂದ ಸಿಸಿಬಿಯಲ್ಲಿ ಕೆಲಸ ಮಾಡೋದು ಕಷ್ಟ ಅಂತ ಒಂದಷ್ಟು ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
PublicNext
23/02/2022 10:04 am