ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾತಿಥ್ಯದ ಆರೋಪ ಪ್ರಕರಣ ಅಂತಿಮ ಹಂತಕ್ಕೆ ತಲುಪಿದೆ. ಎಸಿಬಿ ಯಿಂದ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸದ್ಯ ಚಾರ್ಜ್ ಶೀಟ್ ಸಲ್ಲಿಕೆ ಕುರಿತು ಅಂದಿನ ಕಾರಾಗೃಹ ಡಿಐಜಿ ಡಿ. ರೂಪಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಮಾಜಿ ಸಿಎಂ ಜಯಲಿಲಿತಾ ಹಾಗೂ ಶಶಿಕಲಾ ಅವರಿಗೆ ಇಲ್ಲಿ ರಾಜ್ಯಾತಿಥ್ಯ ನೀಡಿದ್ರು ಅನ್ನೋ ಆರೋಪವನ್ನು ಡಿ ರೂಪ ನಾಲ್ಕು ವರ್ಷಗಳ ಹಿಂದೆ ಬಯಲಿಗೆ ತಂದಿದ್ರು. ಈ ಬಗ್ಗೆ ಸ್ವತಃ ಡಿ ರೂಪ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ್ದಾರೆ.
ಐಎಎಸ್ ಅಧಿಕಾರಿ ವಿನಯ್ ನೇತೃತ್ವದಲ್ಲಿ ತನಿಖೆ ನಡೆದಿತ್ತು. ನಂತ್ರ ಅವರ ವರದಿ ಆಧರಿಸಿ ಎಸಿಬಿ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು. ಈಗ ಎಸಿಬಿ ಅಧಿಕಾರಿಗಳು ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. ತಡ ಆಗಿರಬಹುದು ಆದ್ರೆ ನಾನು ಮಾಡಿದ್ದ ಆರೋಪಕ್ಕೆ ನ್ಯಾಯ ಅನ್ನೋದು ಸಿಕ್ಕಿದೆ.
ಆದ್ರೆ ಮಾಜಿ ಡಿಜಿಪಿಯ ತನಿಖೆಗೆ ಯಾಕೆ ಸರ್ಕಾರ ಅನುಮತಿ ಕೊಟ್ಟಿಲ್ಲ ಅನ್ನೋದು ಗೊತ್ತಿಲ್ಲ. ಒಬ್ಬ ಅಧಿಕಾರಿಯಾಗಿ, ಕಾಮನ್ ಪೀಪಲ್ ಆಗಿ ಸರ್ಕಾರಕ್ಕೆ ಹಾಗೂ ಕಾನೂನು ರೀತಿ ಮನವಿ ಮಾಡಿ ನಾನು ಹೋರಾಟ ಮಾಡ್ತಿನಿ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಜರುಗಲೇಬೇಕು. ಅಂದಿನ ಡಿಜಿಪಿ ನನ್ನ ಮೇಲೆ ಡಿಫಾರ್ಮೇಷನ್ ಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆ. ಅದಕ್ಕೂ ಉತ್ತರ ಕಾನೂನು ರೀತಿಯಲ್ಲಿ ಕೊಡ್ತಿನಿ ಎಂದು ಹೇಳಿದ್ದಾರೆ ಡಿಐಜಿ ಡಿ ರೂಪಾ.
PublicNext
03/02/2022 06:35 pm