ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟೋಯಿಂಗ್ ಸಿಬ್ಬಂದಿ ದುರ್ವರ್ತನೆ : ತನಿಖೆಗೆ ರವಿಕಾಂತೇಗೌಡ ಆದೇಶ

ಬೆಂಗಳೂರು : ಜ.29 ರಂದು ಬೆಂಗಳೂರಿನ ಇಂದಿರಾನಗರದ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡೆಲಿವರಿ ಕೊಡುವ ಯುವಕನ ಜತೆ ಟೋಯಿಂಗ್ ಸಿಬ್ಬಂದಿ ತೋರಿದ ದುರ್ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಸದ್ಯ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ ಆರ್ ರವಿಕಾಂತೇಗೌಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆದೇಶಿಸಿದ್ದಾರೆ.

ಟೋಯಿಂಗ್ ಸಿಬ್ಬಂದಿ ಡೆಲಿವರಿ ಮಾಡುವ ಯುವಕನ ವಾಹನವನ್ನು ತೆಗೆದುಕೊಂಡು ಹೋಗುವಾಗ ಡೆಲಿವರಿ ಯುವಕ ಗಾಡಿ ಹಿಂದೆ ಓಡಿ ಬಂದ ವೇಳೆ ಟೋಯಿಂಗ್ ಸಿಬ್ಬಂದಿ ತೋರಿದ ದುರ್ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೆ ತನಿಖೆಗೆ ಆದೇಶಿಸಲಾಗಿದೆ.

ಇನ್ನು ಈ ಪ್ರಕರಣದ ವಿಚಾರಣೆ ಮುಕ್ತಾಯವಾಗುವವರೆಗೂ ಟೋಯಿಂಗ್ ವಾಹನದ ಸೇವೆಯನ್ನು ಅಮಾನತ್ತಿನಲ್ಲಿಡಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಎಎಸ್ ಐರನ್ನು ಟೋಯಿಂಗ್ ಕರ್ತವ್ಯದಿಂದ ಹಿಂಪಡೆದು ಬೇರೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Edited By : Manjunath H D
PublicNext

PublicNext

30/01/2022 10:27 pm

Cinque Terre

51.64 K

Cinque Terre

4