ಬೆಂಗಳೂರು: ಕೆಲವೊಮ್ಮೆ ದೊಡ್ಡವರ ಜಗಳ ನಡೆಸಿದಾಗ ಸಣ್ಣವರು ಎಂಟ್ರಿ ಕೊಟ್ಟರೆ ಏನಾಗುತ್ತೆ ಅನ್ನೋದಕ್ಕೆ ಈ ಕೇಸ್ ಎಕ್ಸಾಂಪಲ್. ನಮ್ಮಪ್ಪಂಗೆ ಯಾಕ್ ಬೈದೆ ಅಂತ ಕೇಳೋಕೆ ಹೋಗಿದ್ದ ಆ ಯುವಕನಿಗೆ ಆತ ತಲೆ ಮೇಲೆ ಹೊಡೆದು ಹೋಗೋ ನಿಮ್ಮಪ್ಪನ್ನ ಕಳ್ಸು ಅಂದಿದ್ನಂತೆ. ಅಷ್ಟೇ ಬಿಸಿ ರಕ್ತದ ಯುವಕ ಆತನ ಎದೆಗೆ ಚಾಕು ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ರಾಜಗೋಪಾಲ ನಗರ ಠಾಣಾ ವ್ಯಾಪ್ತಿ ಮಾರುತಿ ನಗರದಲ್ಲಿ ತಡರಾತ್ರಿ 42 ವರ್ಷದ ಅಜೀಂನನ್ನು ಕೊಲೆ ಮಾಡಿ ಅನೀಸ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಅಂದ್ಹಾಗೆ ಕಳೆದ ಎರಡು ದಿನಗಳ ಹಿಂದೆ ಅಜೀಂ ಮತ್ತು ಆರೋಪಿ ಅನೀಸ್ ತಂದೆ ನಡುವೆ ಮಾತುಕತೆಯಾಗಿ ಜಗಳವಾಗಿತ್ತಂತೆ. ಅಜೀಂ ಆರೋಪಿಯ ತಂದೆಗೆ ಬೈದಿದ್ನಂತೆ. ಈ ಬಗ್ಗೆ ಕೇಳೋಕೆ ಅಂತ ಹೋಗಿದ್ದ ಅನೀಸ್, ನನ್ ತಂದೆಗೆ ಯಾಕ್ ಹೊಡ್ದೆ ಅಂತ ಕೇಳಿದ್ದಾನೆ. ಈ ವೇಳೆ ನೀನು ಇನ್ನೂ ಚಿಕ್ಕವನು ನಿಮ್ಮಪ್ಪನ ಕಳ್ಸು ಅಂತ ಅಜೀಂ ಅನೀಸ್ ತಲೆ ಮೇಲೆ ಒಂದು ಹೊಡೆದಿದ್ದಾನೆ. ಕೂಡಲೇ ನಂಗೇ ಹೊಡೀತಿಯಾ ಅಂತ ತನ್ನ ಜಾಕೇಟ್ ನಲ್ಲಿದ್ದ ಚಾಕು ತೆಗೆದುಕೊಂಡ ಅನೀಸ್ ಅಜೀಂ ಎದೆಗೆ ನಾಲ್ಕೈದು ಬಾರಿ ಚುಚ್ಚಿ ಎಸ್ಕೇಪ್ ಆಗಿದ್ದಾನೆ. ಕೂಡಲೇ ಅಜೀಂನನ್ನ ಆಸ್ಪತ್ರೆಗೆ ದಾಖಲಿಸೋಕೆ ಮುಂದಾಗಿದ್ದರು. ಆದ್ರೆ ಮಾರ್ಗ ಮಧ್ಯದಲ್ಲೇ ಅಜೀಂ ಸಾವನ್ನಪ್ಪಿದ್ದಾನೆ.
ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ರಾಜಗೋಪಾಲ ನಗರ ಪೊಲೀಸರು ಆರೋಪಿ ಅನೀಸ್ ಪತ್ತೆಗೆ ಮುಂದಾಗಿದ್ದಾರೆ. ಈ ಹಿಂದೆ ಅನೀಸ್ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿರೋ ಮಾಹಿತಿ ಕೂಡ ಇದ್ದು, ಸದ್ಯ ತನಿಖೆ ಮುಂದುವರೆದಿದೆ.
PublicNext
18/08/2022 12:59 pm