ಬೆಂಗಳೂರು: ಈ ಫೋಟೋದಲ್ಲಿ ಕಾಣೋರ ಹೆಸ್ರು ನಾಗರಾಜ, ಮಹದೇವ ಹಾಗೂ ರವಿ. ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಬ್ಬನ್ ಪೇಟೆ ಸಮೀಪದಲ್ಲಿರೋ ವೀರ ಪ್ರತಾಪ್ ಮಾಲೀಕತ್ವದ ವಿ.ಎಸ್ ಜ್ಯುವಲ್ಲರಿ ಶಾಪ್ನಲ್ಲಿ ಕೆಲಸ ಮಾಡ್ತಿದ್ರು. ಕೆಲಸಕ್ಕೆ ಸೇರಿಕೊಂಡ ಆರಂಭದಲ್ಲಿ ಮಾಲೀಕನ ನಂಬಿಕೆ ಗಳಿಸಿ ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ರು. ನಂತರ ತಮಗೆ ಹಣದ ಅವಶ್ಯಕತೆ ಇದ್ದಾಗಲೆಲ್ಲ ಅಂಗಡಿಯಲ್ಲಿದ್ದ ಬೆಳ್ಳಿ ಆಭರಣಗಳನ್ನ ಕದ್ದು ಮಾರಾಟ ಮಾಡೋದಕ್ಕೆ ಶುರು ಮಾಡಿದ್ರಂತೆ.
ಕೆಲಸದವರ ಮೇಲಿನ ನಂಬಿಕೆಯಿಂದ ಏನೂ ಚೆಕ್ ಮಾಡದ ಅಂಗಡಿ ಮಾಲೀಕ ವೀರ ಪ್ರಸಾದ್ ಒಮ್ಮೆ ತಮ್ಮ ಬ್ಯಾಂಕ್ ಖಾತೆಗೆ ಸರಿಯಾಗಿ ಹಣ ಠೇವಣಿ ಆಗ್ತಿಲ್ಲ ಹಾಗೂ ಅಂಗಡಿಯಲ್ಲಿ ಸ್ಟಾಕ್ ಕಡಿಮೆಯಾಗ್ತಿದೆ ಅಂತ ಸುಮ್ಮನೆ ಸಿಸಿಟಿವಿ ಚೆಕ್ ಮಾಡಿದ್ದಾರೆ. ಆಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಆ ಸಿಸಿಟಿವಿ ಫುಟೇಜ್ ಜೊತೆಗೆ ವೀರಪ್ರಸಾದ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ರು. ಕೂಡಲೇ ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿಗಳು 2 ವರ್ಷದಲ್ಲಿ ಕದ್ದ ಬೆಳ್ಳಿಯ ತೂಕ ಬರೋಬ್ಬರಿ 200 ಕೆ.ಜಿ ಅನ್ನೋದು ಗೊತ್ತಾಗಿತ್ತು.
ಆರೋಪಿಗಳನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸ್ರು 41 ಕೆ.ಜಿ ಬೆಳ್ಳಿ ಆಭರಣಗಳು, ಕದ್ದು ಮಾರಾಟ ಮಾಡಿ ಬಂದಿದ್ದ ಹಣದಿಂದ ತೆಗೆದುಕೊಂಡಿದ್ದ 196 ಗ್ರಾಂ ತೂಕದ ಬಂಗಾರ ಹಾಗೂ 4 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ಹಗಲು ವೇಳೆ ಮನೆಗಳ್ಳತನ ಮಾಡ್ತಿದ್ದ ಕುಖ್ಯಾತ ಮನೆಗಳ್ಳ ಚೋರ್ ಇಮ್ರಾನ್ ಎಂಬಾತನನ್ನು ಬಂಧಿಸಿ 6.5 ಲಕ್ಷದ ಚಿನ್ನಾಭರಣವನ್ನ ಸೀಜ್ ಮಾಡಿದ್ದಾರೆ.
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
10/08/2022 03:09 pm