ಲೈಪ್ ಟೈಂ ರೋಡ್ ಟ್ಯಾಕ್ಸ್ ಕಟ್ಟಿರೋ ವಾಹನ ಮಾಲೀಕರು ಈ ಸ್ಟೋರಿ ನೋಡಿ. ದುಬಾರಿ ಕಾರ್ ತಗೊಂಡು ಲಕ್ಷ ಲಕ್ಷ ಟ್ಯಾಕ್ಸ್ ಪೇ ಮಾಡಿದ್ರೂ ನಿಮ್ಮ ಮನೆಗೆ ನೋಟೀಸ್ ಬರಬಹುದು. ಯಾಕಂದ್ರೆ ನೀವ್ ಕಟ್ಟಿರೋ ಟ್ಯಾಕ್ಸ್ ಸರ್ಕಾರದ ಬೊಕ್ಕಸಕ್ಕೆ ಸೇರದ ವಂಚಕರ ಜೇಬು ಸೇರಿರುತ್ತೆ. ಟ್ಯಾಕ್ಸ್ ಹೆಸ್ರಲ್ಲಿ ಹೆಚ್ಚುವರಿ ಹಣ ಪಡೆದು ನಕಲಿ ಬಿಲ್ಕೊಡ್ತಿದ್ದ ಆರ್.ಟಿ.ಓ ಅಧಿಕಾರಿಗಳು ಪೊಲೀಸ್ರಿಗೆ ಸಿಕ್ಕಿಬಿದ್ದಿದ್ದಾರೆ.
ಕೋರಮಂಗಲದಲ್ಲಿ ದಾಖಲಾಗುದ್ದ ಆರ್.ಟಿ.ಓ ಅಧಿಕಾರಿಗಳ ಮೇಲಿನ ಪ್ರಕರಣ ಬಗೆದಷ್ಟು ಹೊರ ಬರ್ತಿದೆ. ಆರ್.ಟಿ.ಓ ನಕಲಿ ರಸೀದಿ ನೀಡಿ ಸ್ಕ್ಯಾಮ್ ಮಾಡಿರೋದು ಪತ್ತೆಯಾಗಿದೆ. ಮಲ್ಲೇಶ್ವರಂ ಬಳಿಕ ಕೋರಮಂಗಲದಲ್ಲಿ ವಂಚನೆ ಕುರಿತು ಎರಡು ಪ್ರಕಣ ದಾಖಲಾಗಿತ್ತು. ಲೈಪ್ ಟೈಮ್ ಟ್ಯಾಕ್ಸ್ ಕಟ್ಟಿಸಿಕೊಳ್ಳುವ ಆರ್.ಟಿ.ಓ ಡಿಎ ರವಿಶಂಕರ್ ಮತ್ತು ಸಂತೋಷ್ ಎಂಬವರು ವಂಚನೆ ಮಾಡಿರುವದು ಪತ್ತೆಯಾಗಿದೆ.
ಈಗಾಗಲೇ ಒಂದು ಕೇಸಲ್ಲಿ ಬಂಧಿತನಾಗಿದ್ದ ಎಸ್ ಡಿಎ ರವಿಶಂಕರ್ ಜೊತೆಗೆ ಮತ್ತೊಬ್ಬ ಆರೋಪಿ ಸಂತೋಷ್ ಬಂಧನವಾಗಿದೆ. ಸದ್ಯ ಪೊಲೀಸರಿಂದ ಸಂತೋಷ್ ಬಂಧನ ವಿಚಾರಣೆ ನಡೆಯುತ್ತಿದ್ದು, ಫ್ಯಾನ್ಸಿ ನಂಬರ್ ಹಾಗೂ ಲೈಪ್ ಟೈಮ್ ಟ್ಯಾಕ್ಸ್ ಕಟ್ಟಿಸಿಕೊಳ್ಳುವ ಹೆಸರಲ್ಲಿ ಹಲವರಿಗೆ ದೋಖಾ ಮಾಡಿರೋದು ಪತ್ತೆಯಾಗಿದೆ.
PublicNext
13/08/2022 08:38 pm