ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬುದ್ದಿ ಹೇಳಿದ್ದಕ್ಕೆ ಕೊಲೆ ಮಾಡಿದ್ದ ಆರೋಪಿಗಳು ಅಂದರ್

ದಾಸರಹಳ್ಳಿ: ಈ ಕಾಲದ ‌ಹುಡುಗರಿಗೆ ಒಂದು ಹೇಳಿದ್ರೆ ಹೆಚ್ಚು ಒಂದು ಹೇಳಿದ್ರೆ ಕಡಿಮೆ. ಕೆಲವೊಮ್ಮೆ ದೊಡ್ಡವರ ಜಗಳ ನಡೆದಾಗ ಸಣ್ಣೋರು ಎಂಟ್ರಿ ಕೊಟ್ರೆ ಏನಾಗುತ್ತೆ ಅನ್ನೋದಕ್ಕೆ ಈ ಕೇಸ್ ಸಾಕ್ಷಿ. ನಮ್ಮಪ್ಪಂಗೆ ಯಾಕ್ ಬೈದೆ ಅಂತಾ ಕೇಳೋಕೆ ಹೋಗಿದ್ದ ಆ ಯುವಕನಿಗೆ ಆತ ತಲೆ ಮೇಲೆ ಹೊಡೆದು ನೀನು ಚಿಕ್ಕವನು ಹೋಗೋ ನಿಮ್ಮಪ್ಪನ್ನ ಕಳ್ಸು ಅಂದಿದ್ದ ಅಷ್ಟೇ. ಜೇಬಲ್ಲಿದ್ದ ಚಾಕು ತೆಗೆದು ಸೀದಾ ಆತನ ಎದೆಗೆ ಇಳಿಸಿದ್ದ.

ರಾಜಗೋಪಾಲ ನಗರ ಠಾಣಾ ವ್ಯಾಪ್ತಿ ಮಾರುತಿ ನಗರದಲ್ಲಿ ತಡರಾತ್ರಿ 42 ವರ್ಷದ ಅಜೀಂ ಕೊಲೆ‌ ಮಾಡಿ ಅನೀಸ್ ಎಂಬಾತ ಎಸ್ಕೇಪ್‌ ಆಗಿದ್ದ. ಸದ್ಯ ಈ ಕೊಲೆ ಆರೋಪದಡಿ ಅನೀಸ್ ಹಾಗೂ ಅಕ್ಮಲ್‌ನ ರಾಜಗೋಪಲನಗರ ಪೊಲೀಸರು ಬಂಧಿಸಿದ್ದಾರೆ ‌.

ಕಳೆದ ಇದೇ ತಿಂಗಳ 17ನೇ ತಾರೀಖು ಮೃತ ಅಜೀಂ ಮತ್ತು ಆರೋಪಿ ಅನೀಸ್ ತಂದೆ ನಡುವೆ ಮಾತುಕತೆಯಾಗಿ ಜಗಳವಾಗಿತ್ತಂತೆ. ಅಜೀಂ ಆರೋಪಿಯ ತಂದೆಗೆ ಬೈದಿದ್ನಂತೆ. ಈ ಬಗ್ಗೆ ಕೇಳೋಕೆ ಅಂತಾ ಹೋಗಿದ್ದ ಅನೀಸ್ ನನ್ ತಂದೆಗೆ ಯಾಕ್ ಹೊಡ್ದೆ ಅಂತಾ ಕೇಳಿದ್ದಾನೆ. ಈ ವೇಳೆ ‌ನೀನ್ ಇನ್ನೂ ಚಿಕ್ಕೋನು ನಿಮ್ಮಪ್ಪನ ಕಳ್ಸು ಅಂತಾ ಅಜೀಂ ಅನೀಸ್ ತಲೆ ಮೇಲೆ‌ ಒಂದು ಹೊಡೆದಿದ್ದಾನೆ.

ಕೂಡಲೇ ನಂಗೇ ಹೊಡೀತಿಯಾ ಅಂತಾ ತನ್ನ ಜಾಕೇಟ್‌ನಲ್ಲಿದ್ದ ಚಾಕು ತೆಗೆದುಕೊಂಡ ಅನೀಸ್ ಅಜೀಂ ಎದೆಗೆ ನಾಲ್ಕೈದು ಬಾರಿ ಚುಚ್ಚಿ ಎಸ್ಕೇಪ್‌ ಆಗಿದ್ದ. ಪುಡಿ ರೌಡಿರೀತಿ ಹೆಗ್ಗನಹಳ್ಲಿ ಸುತ್ತಮುತ್ತ ಓಡಾಡಿಕೊಂಡಿದ್ದ ಅನೀಸ್ ಮನೆ ಬಳಿಯೆ ನಮ್ಮಪ್ಪನ ಮೇಲೆ ಜಗಳಕ್ಕೆ ಬಂದ್ರೆ ನನ್ನ ಹವಾ ಕಡಿಮೆ ಆಗುತ್ತೆ ಅಂತ ಕೃತ್ಯ ಎಸಗಿದ್ದ. ಈ ಹಿಂದೆ ಜೆಜೆಆರ್ ನಗರದಲ್ಲಿ ವಾಸವಿದ್ದ ಅನೀಸ್ ವರುಷದ ಹಿಂದಷ್ಟೇ ಹೆಗ್ಗನಹಳ್ಳಿಗೆ ಶಿಫ್ಟ್‌ ಆಗಿದ್ದ. ಈ ಕೃತ್ಯದಿಂದ ಆರೋಪಿ ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ..

Edited By : Somashekar
PublicNext

PublicNext

24/08/2022 08:06 pm

Cinque Terre

36.12 K

Cinque Terre

1

ಸಂಬಂಧಿತ ಸುದ್ದಿ