ಬೆಂಗಳೂರು: ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆ, ದಕ್ಷತೆ ಇದ್ದರೆ ಅಂತವರಿಗೆ ಪ್ರಮೋಷನ್ ಸಿಗುವುದು ಸಾಮಾನ್ಯ. ಆದರೆ, ಎಸಿಬಿ ದಾಳಿಗೆ ಗುರಿಯಾಗಿ 6 ತಿಂಗಳು ಮನೆಗೆ ಕಳುಹಿಸಲ್ಪಟ್ಟಾಕೆ ಮತ್ತೆ ಬನ್ನೇರುಘಟ್ಟ ಸಬ್ ರಿಜಿಸ್ಟರ್ ಆಫೀಸರ್ ಆಗಿ ನೇಮಕವಾಗಿದ್ದಾರೆ!
ʼಲಂಚ ಮುಕ್ತ, ಭ್ರಷ್ಟತೆ ಮುಕ್ತʼ ಮಾಡ್ಬೇಕಂತ ಸರ್ಕಾರ ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದೆ. ಜತೆಗೆ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕಲು ಎಸಿಬಿಯನ್ನು ನೇಮಿಸಿದೆ. ಆದರೆ, ಲಂಚ ಪಡೆದು ಹಲವು ಬಾರಿ ಸಸ್ಪೆಂಡ್ ಆಗಿದ್ದ ಮಹಿಳಾ ಅಧಿಕಾರಿಯೊಬ್ಬರು ಮತ್ತೆ ಬನ್ನೇರುಘಟ್ಟ ಉಪನೋಂದಣಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ! ಹೌದು. ಇದೇ ಅಂಜಲಿ ಈ ಹಿಂದೆ ಚಿಕ್ಕಜಾಲ ಉಪನೋಂದಣಾಧಿಕಾರಿ ಆಗಿದ್ದಾಗ ಎಸಿಬಿ ದಾಳಿಯಲ್ಲಿ ಸಸ್ಪೆಂಡ್ ಆಗಿದ್ದರು.
ಈಗಾಗಲೇ ಎಸಿಬಿಯಲ್ಲಿ ಟ್ರಪ್ ಆಗಿದ್ದವರನ್ನೇ ಮತ್ತೆ ಕಚೇರಿಯಲ್ಲಿ ಲೇವಾದೇವಿಗೆ ಇಟ್ಟುಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, ಮಧ್ಯವರ್ತಿಗಳು ಸಾರ್ವಜನಿಕರಿಂದ ನೋಂದಣಿ ಶುಲ್ಕಕ್ಕಿಂತ ದುಪ್ಪಟ್ಟು ಹಣ "ದೋಚು" ತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಬನ್ನೇರುಘಟ್ಟ ಸಬ್ ರಿಜಿಸ್ಟ್ರೇಷನ್ ಆಫೀಸ್ ನಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು, ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ. ಇಲ್ಲಿನ ಡಿ ಗ್ರೂಪ್ ನೌಕರರೂ ಐಷಾರಾಮಿ ಕಾರುಗಳಲ್ಲಿ ಬಂದು ಕಚೇರಿಯಿಂದ ದೂರದಲ್ಲಿ ನಿಲ್ಲಿಸಿ, ಕೆಲಸಕ್ಕೆ ಬರುತ್ತಿದ್ದಾರೆಂಬ ಆರೋಪವಿದೆ. ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ಬಾರಿ ದೂರು ನೀಡಿದರೂ ಅಧಿಕಾರಿಗಳು ಕ್ಯಾರೇ ಅಂತಿಲ್ಲ. ಇನ್ನಾದರೂ ಈ ಅಧಿಕಾರಿಗಳು ಎಚ್ಚೆತ್ತುಕೊಳ್ತಾರೋ ಕಾದು ನೋಡೋಣ.
Kshetra Samachara
02/06/2022 10:38 pm