ಬೆಂಗಳೂರು: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಹದಿನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಹೆಬ್ಬಾಳದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆದಿದೆ.
ಒಂದು ಸಣ್ಣ ಮಳೆಗೆ ಪಾದಚಾರಿ ಮಾರ್ಗದಲ್ಲಿ ನೀರು ನಿಂತ ಪರಿಣಾಮ ಶಾಲಾ ವಿದ್ಯಾರ್ಥಿಗಳು ರಸ್ತೆಯ ಡಿವೈಡರ್ ಕ್ರಾಸ್ ಮಾಡಿ ರಸ್ತೆ ದಾಟುವಾಗ ಕಸದ ಲಾರಿಗೆ ಸಿಲುಕಿ 14 ರ ಬಾಲೆ ಅಕ್ಷಯ ಮೃತಪಟ್ಟಿದ್ದಾಳೆ. ಈ ದುರ್ಘಟನೆ ಕಂಡ ಜನ ಬಿಬಿಎಂಪಿ ನಿರ್ಲಕ್ಷ್ಯ ಕ್ಕೆ ಹಿಡಿ ಶಾಪ ಹಾಕಿದ್ದಾರೆ.
ಇನ್ನೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಅಪಘಾತ ಸಂಭವಿಸಿದ್ದು, ಮೊದಲು ನಾಲ್ಕು ವಿದ್ಯಾರ್ಥಿಗಳು ಡಿವೈಡರ್ ಕ್ರಾಸ್ ಮಾಡಿದ್ದಾರೆ.ಕೊನೆಯಲ್ಲಿದ್ದ ಬಾಲಕಿ ಅಕ್ಷಯ ಡಿವೈಡರ್ ಕ್ರಾಸ್ ಮಾಡುವ ವೇಳೆಗೆ ಬಂದ ಟೂ ವೀಲರ್ ಬಾಲಕಿ ನೋಡಿ ಬ್ರೇಕ್ ಹಾಕಿದ್ದ. ಈ ವೇಳೆ ಹಿಂಬದಿ ಇದ್ದ ಕಸದ ಲಾರಿ ಅಪ್ಪಳಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು,ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಇನ್ನೂ ಪಾದಚಾರಿ ಮಾರ್ಗದಲ್ಲಿ ನೀರು ನಿಂತಿದ್ದು ಬಟ್ಟೆ ಗಲೀಜಾಗುತ್ತೆ ಅಂತ ಬಾಲಕಿ ರಸ್ತೆ ಕ್ರಾಸ್ ಮಾಡಿದ್ದಾಳೆ.ಆದ್ರೆ ಬಿಬಿಎಂಪಿ ಎಚ್ಚೆತ್ತು ಕೊಂಡು ವಾಟರ್ ಕ್ಲಿಯರ್ ಮಾಡಿದಿದ್ರೆ ಈ ಅವಘಡ ಸಂಭವಿಸುತ್ತಿರಲಿಲ್ಲ.ಇನ್ನೂ ಆರ್ ಟಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಖುದ್ದು ಸಂಚಾರ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
21/03/2022 05:19 pm