ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಸ್ಯಾಂಡಲ್‌ವುಡ್ ನಿರ್ಮಾಪಕ

ಬೆಂಗಳೂರು: ಸಾಲ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ಸ್ಯಾಂಡಲ್​​ವುಡ್ ನಿರ್ಮಾಪಕನ ವಿರುದ್ಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟ ಪ್ರಥಮ್ ಅಭಿನಯದ ಎಂಎಲ್ಎ ಚಿತ್ರದ ನಿರ್ಮಾಪಕ ವೆಂಕಟೇಶ್ ರೆಡ್ಡಿ ಎಂಬಾತನ ವಿರುದ್ಧ ಈ ಗಂಭೀರ ಆರೋವಿದೆ.

ತಾನು ರಿಯಲ್ ಎಸ್ಟೇಟ್ ಉದ್ಯಮಿ, ವಕೀಲ ಹಾಗೂ ಚಿತ್ರರಂಗದಲ್ಲಿ ನಿರ್ಮಾಪಕ ಅಂತಾ ಹೇಳಿದ್ದ ವೆಂಕಟೇಶ್ ರೆಡ್ಡಿ, ಸಂಜಯ್ ರಾಜ್ ಬಿ.ಸಿ ಎಂಬುವವರಿಗೆ ಲೋನ್ ಕೊಡಿಸುವುದಾಗಿ ಹೇಳಿದ್ದ. ನನಗೆ ರಾಷ್ಟ್ರೀಕೃತ ಬ್ಯಾಂಕ್ ನವರು ಪರಿಚಯವಿದ್ದಾರೆ. 35 ಲಕ್ಷ ಹಣ ಸಾಲ ಕೊಡಿಸುತ್ತೇನೆ ಅಂತಾ ಹೇಳಿ 5 ಲಕ್ಷ ಹಣ ಕೇಳಿದ್ದ. ನಂತರ ಹಂತ ಹಂತವಾಗಿ ಶ್ರೀನಿಧಿ, ರವಿಕುಮಾರ್ ಹಾಗೂ ದಿನೇಶ್ ಎಂಬುವವರ ಖಾತೆಗಳಿಗೆ ಒಟ್ಟು 8 ಲಕ್ಷ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ ಎಂದ ಸಂಜಯ್ ರಾಜ್ ಬಿ.ಸಿ ಎಂಬುವವರು ದೂರು ನೀಡಿದ್ದಾರೆ. ಈ ಸಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.

Edited By : Nagaraj Tulugeri
PublicNext

PublicNext

30/07/2022 04:43 pm

Cinque Terre

15.12 K

Cinque Terre

2

ಸಂಬಂಧಿತ ಸುದ್ದಿ