ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಂಸಲೇಖ ವಿರುದ್ಧ ದೂರು ದಾಖಲು : ವಿಚಾರಣೆಗೆ ಬಂದ ನಾದಬ್ರಹ್ಮ

ಬೆಂಗಳೂರು : ಪೇಜಾವರ ಸ್ವಾಮೀಜಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಇಂದು ವಿಚಾರಣೆಗಾಗಿ ಆಗಮಿಸಿದ್ದಾರೆ.

ಇನ್ನು ಬಸವನಗುಡಿ ಪೊಲೀಸ್ ಠಾಣೆ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಂಸಲೇಖ ಪರ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು ಜೈಭೀಮ್ ಘೋಷಣೆ ಒಂದೆಡೆಯಾದ್ರೆ ಮತ್ತೊಂದೆಡೆ ಜೈಶ್ರೀರಾಮ್ ಘೋಷಣೆ ಮೊಳಗುತ್ತಿವೆ.

ಇದರ ಬೆನ್ನಲ್ಲೇ ಠಾಣೆಗೆ ಆಗಮಿಸಿದ ಹಂಸಲೇಖ ಅವರ ವಿಚಾರಣೆ ನಡೆದಿದೆ. ಈ ಕುರಿತು ಹಂಸಲೇಖ ಪರ ವಕೀಲ ಮಹದೇವಸ್ವಾಮಿ ಮಾತನಾಡಿ ಇಂದಿನ ವಿಚಾರಣೆ ಅಂತ್ಯವಾಗಿದೆ. ಮುಂದೆ ಯಾವಾಗ ವಿಚಾರಣೆ ಕರೆದಾಗ ಬರಬೇಕು ಎಂದು ಹೇಳಿದ್ದಾರೆ. ಇಂತಹುದೇ ದಿನ ವಿಚಾರಣೆಗೆ ಬರುವಂತೆ ಹೇಳಿಲ್ಲ. ವಿಚಾರಣೆಯ ಬಗ್ಗೆ ತಿಳಿಸಿದಾಗ ಬನ್ನಿ ಎಂದಿದ್ದಾರೆ ನಮಗೆ ಸಂವಿಧಾನದ ಮೇಲೆ ನಂಬಿಕೆ ಇದೆ ಎಂದರು.

Edited By : Manjunath H D
Kshetra Samachara

Kshetra Samachara

25/11/2021 02:38 pm

Cinque Terre

398

Cinque Terre

0