ಬೆಂಗಳೂರು: ನಟಿ ಸಂಜನಾ ಗಲ್ರಾನಿ ಕ್ಯಾಬ್ ಡ್ರೈವರ್ ಕಿತ್ತಾಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸಂಜನಾ ಕ್ಯಾಬ್ ಡ್ರೈವರ್ ಮಣಿ ಮೇಲೆ ಮಾಡಿದ ಆರೋಪ ಸುಳ್ಳು ಅನ್ನೊ ರೀತಿಯ ಒಂದ್ ವೀಡಿಯೋ ಈಗ ಹೊರ ಬಿದ್ದಿದೆ. ಖುದ್ ಡ್ರೈವರ್ ಮಣಿನೆ ಈ ವೀಡಿಯೋ ರಿಲೀಸ್ ಮಾಡಿ ತನ್ನದೇನೂ ತಪ್ಪಿಲ್ಲ ಅಂತ ಹೇಳಿದ್ದಾರೆ.
ಸಂಜನಾ ಮತ್ತು ಕಾರ್ ಡ್ರೈವರ್ ಮಧ್ಯ ಅಂದು ಕಾರ್ ಅಲ್ಲಿ ಏನ್ ನಡೀತು. ಯಾರಿಗೂ ಗೊತ್ತಿಲ್ಲ. ಆದರೆ ಕಾರ್ ಡ್ರೈವರ್ ಮಣಿ ತಮ್ಮ ಫೋನ್ ಅಲ್ಲಿ ಸಂಜನಾ ಅವಾಚ್ಯವಾಗಿ ಬೈದಿರೋದನ್ನ ಚಿತ್ರೀಕರಿಸಿದ್ದಾರೆ. ಅದೇ ವೀಡಿಯೋವನ್ನೆ ಸಾಕ್ಷಿಯಾಗಿ ಈಗ ಇಟ್ಟುಕೊಂಡಿದ್ದಾರೆ. ಕ್ಯಾಬ್ ಡ್ರೈವರ್ ಜತೆ ಕಿತ್ತಾಡಿದ ಬಳಿಕ ಸಂಜನಾ,ಟ್ವಿಟರ್ ಅಲ್ಲಿ ಕ್ಯಾಬ್ ಡ್ರೈವರ್ ಹೆಸರು ಮತ್ತು ನಂಬರ್ ಹಾಕಿ, ಕ್ಯಾಬ್ ಡ್ರೈವರ್ ತೊಂದರೆ ಕೊಟ್ಟ ಅಂತ ಬರೆದುಕೊಂಡಿದ್ದರು.ಇದರಿಂದ ಬೇಸರಗೊಂಡ ಕ್ಯಾಬ್ ಡ್ರೈವರ್ ಮಣಿ ತಮ್ಮ ಬಳಿಯ ವೀಡಿಯೋ ರಿಲೀಸ್ ಮಾಡಿದ್ದಾರೆ. ಸಂಜನಾ ವಿರುದ್ಧ ಕರ್ನಾಟಕ ಚಾಲಕರ ಒಕ್ಕೂಟಕ್ಕೂ ದೂರು ಕೊಟ್ಟಿದ್ದಾರೆ.
Kshetra Samachara
06/10/2021 01:18 pm