ಆನೇಕಲ್ : (ತಮಿಳುನಾಡು ) ಪಟಾಕಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ಸುಟ್ಟು ಭಸ್ಮ ಆಗಿರಬಹುದು, ಘಟನೆ ಹೊಸೂರು ಬೆಂಗಳೂರಿಗೆ ಹೋಗುವ ರಸ್ತೆಯ ಬಳಿ ನಡೆದಿದೆ..
ವಡ್ವೇಲ್ ಮಾಲೀಕತ್ವದ ಪಟಾಕಿ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಅಂಗಡಿಯ ತುಂಬೆಲ್ಲ ಪಟಾಕಿ ಸಿಡಿದು ಹೊಗೆ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಇನ್ನು ಅಗ್ನಿಶಾಮಕ ದಳದವರು ಸುಮಾರು 2 ಗಂಟೆಗಳ ಕಾಲ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಡಿಎಸ್‌ಪಿ ಅರವಿಂದ್ ನೇತೃತ್ವದ ಅಗ್ನಿಶಾಮಕದ 20ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಭಯ ಸಂಭವಿಸಿಲ್ಲ.
Kshetra Samachara
28/08/2022 10:33 am