ಆನೇಕಲ್ : ಅವ್ರು ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮುದ್ದಾದ ಗಂಡು ಮಕ್ಕಳು ಸಹ ಇದ್ದಾರೆ.
ಇನ್ನು ಮದುವೆಯಾದ ನಾಲ್ಕೈದು ವರ್ಷ ಚೆನ್ನಾಗಿದ್ದ ಸಂಸಾರದಲ್ಲಿ ಕಳೆದ ಐದಾರು ವರ್ಷಗಳಿಂದ ಸಂಸಾರ ತಾಳ ತಪ್ಪಿತ್ತು. ಪದೇ ಪದೇ ಮನೆಯಲ್ಲಿ ಪತಿ ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಪತ್ನಿ ಠಾಣೆಗೆ ಹೋಗಿ ದೂರು ನೀಡಲು ಮುಂದಾಗಿದ್ದರು.
ಇನ್ನು ಪತ್ನಿಯ ಹಿಂದೆಯೇ ಬಂದ ಪತಿ ಠಾಣೆಯ ಮುಂಭಾಗವೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ.
ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಕೌಟುಂಬಿಕ ಕಲಹಕ್ಕೆ ವ್ಯಕ್ತಿಯೋರ್ವ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಕ್ಕಮಗಳೂರು ಮೂಲದ ರತೀಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಯಾಗಿದ್ದು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾನೆ . ಕಳೆದ ಹಲವು ವರ್ಷಗಳ ಹಿಂದೆ ಜಿಗಣಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ರತೀಶ್ ಕವಿತಾ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ.
ಎಲ್ಲವೂ ಚೆನ್ನಾಗಿತ್ತು ಎನ್ನುವಷ್ಟರಲ್ಲಿ ಪತಿ ಪತ್ನಿ ನಡುವೆ ಕಲಹ ಶುರುವಾಗಿತ್ತು. ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಿದರು ಸರಿಯಾಗಿರಲಿಲ್ಲ. ನಿನ್ನೆ ಸಹ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪತ್ನಿ ಜೊತೆ ಪತಿ ರತೀಶ್ ಜಗಳ ತೆಗೆದಿದ್ದ ಎನ್ನಲಾಗಿದೆ.
ಇನ್ನೂ ಕಳೆದ ಎರಡು ದಿನಗಳಿಂದಲೂ ಸಹ ಇಬ್ಬರ ನಡುವೆ ಗಲಾಟೆ ನಡೆದಿದ್ದರಿಂದ ಕವಿತ ಪೋಷಕರಿಗೆ ವಿಚಾರ ತಿಳಿಸಿ ತಂದೆ ಮಾದೇವರನ್ನ ಜಿಗಣಿಗೆ ಕರೆಸಿಕೊಂಡು ಪತಿಯ ವಿರುದ್ಧ ದೂರು ನೀಡಲು ಠಾಣೆಗೆ ತೆರಳಿದ್ದಳು. ಪತಿಯು ಸಹ ಪತ್ನಿಯ ಹಿಂದೆಯೇ ಬಂದು ಠಾಣೆಯ ಎದುರಿನಲ್ಲಿ ತನ್ನ ದ್ವಿಚಕ್ರ ವಾಹನವನ್ನ ನಿಲ್ಲಿಸಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಇದನ್ನ ಗಮನಿಸಿದ ಠಾಣೆಯಲ್ಲಿದ್ದ ಪೊಲೀಸರು ರಕ್ಷಣೆ ಮಾಡಿ ಕೂಡಲೇ ಆ್ಯಂಬುಲೆನ್ಸ್ ಮೂಲಕ ರತೀಶ್ ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಶೇಕಡಾ 80 ರಷ್ಟು ರತೀಶ್ ದೇಹ ಸುಟ್ಟ ಕಾರಣ ಇಂದು ಕೊನೆಯುಸಿರೆಳಿದ್ದಾನೆ.
ಒಟ್ಟಿನಲ್ಲಿ ಪತಿ-ಪತ್ನಿಯ ಜಗಳ ಉಂಡು ಮಲಗುವ ತನಕ ಇರದೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪತ್ನಿಯ ಮೇಲಿನ ಕೋಪಕ್ಕೆ ಠಾಣೆ ಎದುರೇ ಪತಿ ಸಾವನ್ನಪ್ಪಿದ್ದು ದುರಂತವೇ ಸರಿ.
ಹರೀಶ್ ಗೌತಮ ನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
26/08/2022 07:57 pm