ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೆಲಮಂಗಲ ಗ್ರಾಮದ ಎಂಟ್ರೆನ್ಸ್ ಆರ್ಚ್ ಮುರಿದು ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವು!

ನೆಲಮಂಗಲ: ಆತ 5 ತಿಂಗಳ ಪುಟ್ಟ ಕಂದಮ್ಮನನ್ನ ಬಿಟ್ಟು ನೆರೆ ರಾಜ್ಯದಿಂದ ಬದುಕು ಕಟ್ಟಿಕೊಳ್ಳೋಕೆ ಅಂತ ನಗರಕ್ಕೆ ಬಂದು ಕೆಲಸಕ್ಕೆ ಸೇರ್ಕೊಂಡಿದ್ದ. ಕೆಲಸಕ್ಕೆ ಸೇರಿ ಕೇವಲ 2 ದಿನ ಕಳೆದಿತ್ತು. ಇನ್ನೇನು ಜೀವನ ರೂಪಿಸಿಕೊಳ್ಳೋಕೆ ಕೆಲ್ಸ ಸಿಕ್ತು ಹೆಂಡ್ತಿ ಮಕ್ಕಳ್ಳನ್ನ ಕರ್ಕೊಂಡು ಬೆಂಗಳೂರಿಗೆ ಬರೋ ಕನಸು ಕಟ್ಕೊಂಡಿದ್ದವನು, ತನ್ನದಲ್ಲದ ತಪ್ಪಿಗೆ ಜವರಾಯನ ಅಟ್ಟಹಾಸಕ್ಕೆ ಈತ ಶವವಾಗಿದ್ದಾನೆ.‌

ಗ್ರಾಮದ ಹೆಬ್ಬಾಗಿಲಿನ ದೊಡ್ಡ ಕಾಂಕ್ರಿಟ್ ಆರ್ಚ್ ಬಿದ್ದು ನುಜ್ಜು ಗುಜ್ಜಾಗಿರುವ ಬೈಕ್, ಕಾಂಕ್ರಿಟ್ ಆರ್ಚ್ ಕೆಳಗಿ ಸಿಲುಕಿರೋ ಸರಕು ತುಂಬಿದ ಕ್ಯಾಂಟರ್ ವಾಹನ, ಜೆಸಿಬಿ ಹಾಗೂ ಕ್ರೈನ್‌ ಮೂಲಕ ನೆಡೆಯುತ್ತಿರೋ ತೆರವು ಕಾರ್ಯ. ಈ ದೃಶ್ಯಗಳೆಲ್ಲ ಕಂಡು ಬಂದಿದ್ದು ಬೆಂಗಳೂರು ಉತ್ತರ ತಾಲೂಕು ಅಡಕಿಮಾರನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ. ಹೌದು ಅಡಕಿಮಾರನಹಳ್ಳಿ ಗ್ರಾಮದ ಮುಖ್ಯದ್ವಾರಕ್ಕೆ ಹೆದ್ದಾರಿ ಮೂಲಕ ವೇಗವಾಗಿ ಬಂದ ಸರಕು ತುಂಬಿದ್ದ ಕ್ಯಾಂಟರ್ ವಾಹನವೊಂದು ದಿಢೀರ್ ಅಂತ ಡಿಕ್ಕಿ ಹೊಡೆದ ರಭಸಕ್ಕೆ ಹೆಬ್ಬಾಗಿಲು ಮೇಲ್ಭಾಗದ ಆರ್ಚ್ ಬೀಮ್ ಬೈಕ್ ಸವಾರ ನರಸಪ್ಪ 30 ವರ್ಷ ಎಂಬಾತನ ಮೇಲೆ ಮುರಿದು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಗ್ರಾಮದ ರಸ್ತೆಯಲ್ಲಿ ಭಾರಿ ವಾಹನಗಳು ಸಂಚಾರಿಸುತ್ತಿದ್ರಿಂದ ರಸ್ತೆಗಳು ಹಾಳಾಗೋದನ್ನ ತಪ್ಪಿಸುಲು ಮತ್ತು ಭಾರಿ ವಾಹನಗಳನ್ನ ನಿಯಂತ್ರಿಸೋ ಸಲುವಾಗಿ ಗ್ರಾಮಸ್ಥರು ಆರ್ಚ್ ನಿರ್ಮಾಣ ಮಾಡಿದ್ರು ಎನ್ನಲಾಗಿದೆ. ಭಾರಿ ವಾಹನಗಳಿಗೆ ರಾವುತ್ತನಹಳ್ಳಿಯ ಪರ್ಯಾಯ ರಸ್ತೆ ಇದ್ದರೂ ಅಲ್ಲಿನ ರಸ್ತೆ ಗುಂಡಿಗಳಿಂದ ಹದಗೆಟ್ಟದ್ರಿಂದ ಸರಕು ತುಂಬಿದ್ದ ಕ್ಯಾಂಟರ್ ವಾಹನ ಈ ಗ್ರಾಮದ ರಸ್ತೆ ಮೂಲಕ ಏಕಾಏಕಿ ಎಂಟ್ರಿ ಕೊಟ್ಟಿದೆ ಅಷ್ಟೇ ಆಗ ಹೆಬ್ಬಾಗಿಲ ಮೇಲಿನ ಆರ್ಚ್ ವಾಹನಕ್ಕೆ ತಡೆದಿದ್ದು, ಬೈಕ್ ಸವಾರನ ಮೇಲೆ ಬಿದ್ದು ಈ ಅವಘಡ ನೆಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಹೌದು ಮೃತ ನರಸಪ್ಪ ಆಂಧ್ರ ಮೂಲದ ಅದೋನಿಯವನು, ಕಳೆದ 7 ವರ್ಷಗಳ ಹಿಂದೆ ಮದುವೆಯಾಗಿ ಒಂದು ಹೆಣ್ಣು ಮಗು, ಮತ್ತೊಂದು 5 ತಿಂಗಳ ಗಂಡು ಮಗುವಿತ್ತು. ಮಗು ಆದ ನಂತ್ರ ಜವಾಬ್ದಾರಿ ಹೆಚ್ಚಿದ ಪರಿಣಾಮ ಬದುಕು ಕಟ್ಟಿಕೊಳ್ಳೋಕೆ ಅಂತಾ ಅಡಕಿಮಾರನಹಳ್ಳಿಯ ಖಾಸಗಿ ಕಂಪನಿಯೊಂದ್ರಲ್ಲಿ ಕಳೆದ 2 ದಿನಗಳ ಹಿಂದೆ ಕೆಲಸಕ್ಕೆ ಸೇರಿಕೊಂಡು, ದಾಸನಪುರದಲ್ಲಿನ್ನ ತನ್ನ ಸಂಬಂಧಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಆದ್ರೆ ಹೇಗೂ ಕೆಲ್ಸ ಸಿಕ್ಕಿದೆ ಸಂಜೆ ಊರಿಗೆ ಹೋಗೆ ಹೆಂಡತಿ ಮಕ್ಕಳೊಂದಿಗೆ ಸಂತೋಷದಿಂದ ಇದ್ದು ಮೊದಲ ತಿಂಗಳ ಸಂಬಳ ಬಂದ್ಮೇಲೆ ಬೇರೆ ಮನೆ ಮಾಡಿ ಕರೆದುಕೊಂಡು ಬರುತ್ತೇನೆಂದು ತನ್ನ ಅತ್ತೆ ಬಳಿ ಹೇಳಿಕೊಂಡಿದ್ದ. ಆದ್ರೆ ಇಂದು ಮುಂಜಾನೆ ಜವರಾಯನ ಅಟ್ಟಹಾಸಕ್ಕೆ ಇಹಲೋಕ ತ್ಯಜಿಸಿದ್ದಾನೆ.

ಘಟನೆ ಬಳಿಕ ಸ್ಥಳೀಯರು ಗಾಯಾಳು ನರಸಪ್ಪನನ್ನು ಕೂಡಲೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸೋ ಪ್ರಯತ್ನ ಮಾಡಿದ್ರು ಸಹ ಬದುಕುಳಿಯಲಿಲ್ಲ. ಇದೇ ವೇಳೆ ಕ್ಯಾಂಟರ್ ವಾಹನ ಚಾಲಕ ಕನ್ಜಿನ್ ಪಾಷಾನನ್ನ ಹಿಡಿದ ಗ್ರಾಮಸ್ಥರು ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ರು ಚಾಲಕನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

04/06/2022 07:11 pm

Cinque Terre

7.65 K

Cinque Terre

1

ಸಂಬಂಧಿತ ಸುದ್ದಿ