ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂಕ ಪ್ರಾಣಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಯಾವಾಗ ಬ್ರೇಕ್ ಬೀಳುತ್ತದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಅದರಲ್ಲೂ ಬೀದಿ ನಾಯಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಇದರಿಂದ ಅಮಾಯಕ ನಾಯಿಗಳು ತಮ್ಮ ಉಸಿರು ಚೆಲ್ಲುತ್ತಿವೆ. ಈಗ ಇನ್ನೊಂದು ಅಮಾಯಕ ನಾಯಿ ಬೆಂಗಳೂರಿನಲ್ಲಿ ಬಲಿಯಾಗಿದೆ. ಹೀಗೆ ಕಾರು ಚಾಲಕನ ಕೃತ್ಯಕ್ಕೆ ಬಲಿಯಾದ ಶ್ವಾನದ ಹೆಸರು ಕರಿಯ. ಇದು ಏರಿಯಾದ ಜನರಿಗೆ ಇಷ್ಟವಾದ ನಾಯಿ.
ಕಳೆದ ಶುಕ್ರವಾರ ಮಧ್ಯಾಹ್ನ ಈ ಕರಿಯ ತನ್ನ ಪಾಡಿಗೆ ತಾನು ರಸ್ತೆಯ ಮೇಲೆ ಮಲಗಿದ್ದ. ಆದರೆ ಯಮರೂಪಿಯಾಗಿ ಬಂದ ಈ ಕಾರು ನೆಮ್ಮದಿಯಾಗಿ ಮಲಗಿದ್ದ ಕರಿಯನ ಆಮೇಲೆ ಹರೆದಿದೆ. ಪರಿಣಾಮ ಆತ ರಸ್ತೆಯ ಮೇಲೆ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಇಷ್ಟು ದಿನಗಳ ಕಾಲ ಏರಿಯಾದ ಜನರನ್ನು ಕಾಯುತ್ತಿದ್ದ ಕರಿಯ ಉಸಿರು ಚಲ್ಲಿ ರಸ್ತೆಯ ಮೇಲೆ ಬಿದ್ದಿದ್ದ. ಇದರಿಂದ ಕೋಪಗೊಂಡು ಸ್ಥಳೀಯರು ಕಾರು ಚಾಲಕನ ವಿರುದ್ಧ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಿದ್ದಾರೆ. ಈಗ ಪೊಲೀಸರು ಈ ಕಾರು ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ತಿಲಕ್ ನಗರ ಪೊಲೀಸರು ಈಗ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂದು ಪೊಲೀಸರು ನಾಯಿಯ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸ್ಥಳೀಯರಿಗೆ ಹಸ್ತಾಂತರಿಸಿದ್ದಾರೆ. ಕರಿಯನ ಮೃತದೇಹವನ್ನು ಪಡೆದ ಜನರು ಗೌರವದೊಂದಿಗೆ ಅಂತ್ಯಕ್ರಿಯೆ ನರೆವೇರಿಸಿದ್ದಾರೆ. ಕೂಡಲೇ ಆರೋಪಿಯನ್ನು ಪೊಲೀಸರು ಬಂಧಿಸಿ ಕರಿಯನ ಆತ್ಮಕ್ಕೆ ಶಾಂತಿ ನೀಡಬೇಕೆಂದು ಜನರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
30/05/2022 08:04 pm