ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BBMP ಕಸದ ಲಾರಿ ಚಾಲಕನ ಅಜಾಗರೂಕ ಡ್ರೈವಿಂಗ್‌ಗೆ ಅಮಾಯಕ ವ್ಯಕ್ತಿ ಬಲಿ

ಯಲಹಂಕ: ಯಲಹಂಕ ಸಮೀಪದ ರಾಮಯ್ಯ(76) ಎಂಬ ಹಿರಿಯ ಜೀವ ಬಿಬಿಎಂಪಿ ಕಸದ ಲಾರಿ ಚಾಲಕನ‌ ಬೇಜವಾಬ್ದಾರಿ ಡ್ರೈವಿಂಗ್ ಗೆ ಬಲಿಯಾಗಿದ್ದಾರೆ. ಇಂದು ಮದ್ಯಾಹ್ನ 2ಗಂಟೆ ಸುಮಾರಿಗೆ TVSಜುಪಿಟರ್ ಕೆಎ-04-ಜೆ.ವಿ-5998 ವಾಹನದಲ್ಲಿ ಸಾತನೂರಿಗೆ ಹೋಗಿ ಸಂಬಂಧಿಕರೊಬ್ಬರಿಗೆ ಗಂಡು ನೋಡಿ ವಾಪಸ್ಸಾಗುತ್ತಿದ್ದರು. ಈ ವೇಳೆ ರೇವಾ ಇಂಜಿನಿಯರ್ ಕಾಲೇಜ್ ಸಮೀಪದ ಎರಡನೇ ಗೇಟ್ ಹಿಂದಿನಿಂದ ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಕೆಎ-41-ಬಿ-6186 ನಂಬರ್ ನ‌ ಕಸ ಲಾರಿ ಚಾಲಕ ಲಾರಿಯನ್ನು ಗುದ್ದಿದ್ದಾನೆ. ಈ ವೇಳೆ ರಾಮಯ್ಯನ ಮೇಲೆ ಲಾರಿ ಹರಿದು ತೀವ್ರ ರಕ್ತಗಾಯಗಳಾಗಿರುತ್ತವೆ.

ಅಪಘಾತಕ್ಕೆ ಕಾರಣವಾದ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ನಂತರ ಸಾರ್ವಜನಿಕರು ಆಂಬ್ಯುಲೆನ್ಸ್ ಲ್ಲಿ ಚಿಕಿತ್ಸೆಗಾಗಿ ಯಲಹಂಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರಡ. ಪರೀಕ್ಷಿಸಿದ ಅಲ್ಲಿನ ಕರ್ತವ್ಯ ನಿರತ ವೈಧ್ಯರು ರಾಮಯ್ಯ ಮಾರ್ಗ ಮಧ್ಯದಲ್ಲಿಯೇ ಮೃತರಾಗಿರುವುದಾಗಿ ತಿಳಿಸಿದ್ದಾರೆ..

ಈ ದುರಂತ ಘಟನೆ ಸಂಬಂಧ ರಾಮಯ್ಯ ಮಗ ರಾಜಶೇಖರ್ ಲಾರಿಚಾಲಕನ ವಿರುದ್ಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ 279, 304(ಎ) ಐಪಿಸಿ ಮತ್ತು 134 (ಎ & ಬಿ) ಸಹಿತ 187 ಎಂ.ವಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿದೆ. ದೂರು ಹಿನ್ನಲೆ ಪರಾರಿಯಾಗಿರುವ ಚಾಲಕನ ಬಂಧನಕ್ಕೆ ಚಿಕ್ಕಜಾಲ ಪೊಲೀಸರು ಬಲೆಬೀಸಿದ್ದಾರೆ..

ಮೊನ್ನೆಯಷ್ಟೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಲಿ ಶಾಲೆ ಬಾಲಕಿಯನ್ನು BBMP ಕಸದಲಾರಿ ಬಾಲಕಿಯನ್ನು ಬಲಿಪಡೆದಿತ್ತು. ವಾರ ಕಳೆಯುವ ಮುನ್ನವೇ ಮತ್ತೊಂದು ಹಿರಿಜೀವ ಮತ್ತದೇ ಬೇಜವಾಬ್ದಾರಿ ಕಸದಲಾರಿಗೆ ಬಲಿಯಾಗಿರುವುದು ದುರಂತ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿ ತಪ್ಪತಸ್ಥ ಕಸದ ಚಾಲಕರ ಮೇಲೆ, ಕಸದ ಲಾರಿ ಮಾಲೀಕರ ಮೇಲೆ ಕ್ರಮ. ಜರುಗಿಸಿದರೆ ಶಾಲಾ ಬಾಲಕಿ & ರಾಮಯ್ಯ ರೀತಿಯ ಹಿರಿಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯ.

Edited By : Nagaraj Tulugeri
Kshetra Samachara

Kshetra Samachara

31/03/2022 07:57 pm

Cinque Terre

3.17 K

Cinque Terre

0

ಸಂಬಂಧಿತ ಸುದ್ದಿ