ವರನಟ ಡಾ. ರಾಜ್‌ಕುಮಾರ್ ಅಳಿಯ ರಾಮ್‌ಕುಮಾರ್ ಅವರ ಪುತ್ರ ಧೀರೆನ್ ರಾಮ್‌ಕುಮಾರ್ ಸದ್ಯ ಚಂದನ ವನಕ್ಕೆ ಪ್ರವೇಶ ಪಡೆದಿದ್ದಾರೆ. ಧೀರೆನ್ ನಟನೆಯ 'ಶಿವ 143' ಚಿತ್ರ ನಾಳೆ ಆಗಸ್ಟ್ 26ಕ್ಕೆ ಹಿರಿತೆರೆ ಮೇಲೆ ರಾರಾಜಿಸಿ ರಂಜಿಸಲಿದೆ. ಮೊದಲ ಸಿನಿಮಾದಲ್ಲಿ ರಾಜ್ ಕುಟುಂಬದ ಕುಡಿ ಹೇಗೆ ಕಾಣಿಸಿಕೊಳ್ಳಲಿದೆ ಎನ್ನುವ ಕುತೂಹಲ ಸಿನಿ ಪ್ರೇಮಿಗಳಲ್ಲಿದೆ.
ಮಾಸ್ ಹಾಗೂ ಪ್ರೇಮ ಕಥೆಯ ವಿಭಿನ್ನ ಸಿನಿಮಾ ಇದಾಗಿದ್ದು ಧೀರೆನ್‌ಗೆ ಪರ್ಫೆಕ್ಟ್ ಜೋಡಿಯಾಗಿ ಬೊಗಸೆ ಕಂಗಳ ಬೆಡಗಿ ಮಾನ್ವಿತಾ ಕಾಮತ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ನೋಡಿದ ಜನ ಸಿನಿಮಾದ ಕಥೆಯ ಬಗ್ಗೆ ಕೌತುಕರಾಗಿದ್ದಾರೆ. ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ನಾಯಕ-ನಾಯಕಿ ಇಬ್ಬರೂ ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ. ಬನ್ನಿ ಅವರು ಹೇಳಿದ್ದೇನು ಅನ್ನೋದನ್ನ ಕೇಳೋಣ ನೋಡೋಣ..
PublicNext
25/08/2022 07:02 pm