ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 2 ಲಕ್ಷ zomato ಬಾಯ್ಸ್‌ ಮುಷ್ಕರ; "ನಮಗೂ ಬೇಕು ಸೌಲಭ್ಯ, ಬೇಡ ತಾತ್ಸಾರ"

ಬೆಂಗಳೂರು: ಬೆಂಗಳೂರಿನಲ್ಲಿ ಜೊಮಾಟೋ ಹುಡುಗರು 3 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಫುಡ್ ಡೆಲಿವರಿ ಮುಷ್ಕರದಿಂದಾಗಿ ಬೆಂಗಳೂರಿನಲ್ಲಿ ಕೆಲ ದಿನ ಪರಿಣಾಮ ಬೀರಲಿದೆ. ನಗರದಲ್ಲಿ 2 ಲಕ್ಷಕ್ಕೂ ಹೆಚ್ಚು ಡೆಲಿವರಿ ಬಾಯ್‌ಗಳು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.

ಪಿಕಪ್ ಚಾರ್ಜ್ ಹೆಚ್ಚಳ ಮಾಡಬೇಕು, ರೆಸ್ಟೋರೆಂಟ್ ವೇಟಿಂಗ್‌ ಚಾರ್ಜ್ ಕೊಡಬೇಕು. ಹೆಲ್ತ್ ಇನ್ಶೂರೆನ್ಸ್ ಕಾರ್ಡ್ ಕೊಡಬೇಕು ಹಾಗೂ ಗಿಗ್ಸ್ ಕೂಡಲೇ ತೆಗೆಯಬೇಕು.

ಬೆಂಗಳೂರಿನ ಹಲವು ಭಾಗಗಳಲ್ಲಿ ಒಟ್ಟು ಎಂಟು ಕಡೆ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಫುಡ್ ಡೆಲಿವರಿ ಬಾಯ್ಸ್ ಭಾಗಿಯಾಗಿದ್ದಾರೆ. ಡೆಲಿವರಿ ಮಾಡುವಾಗ ಅನೇಕ ಹುಡುಗರು ಪ್ರಾಣ ಕಳೆದುಕೊಂಡಿದ್ದಾರೆ.

ಆದರೆ, zomato ಕಂಪನಿಯಿಂದ ಯಾವುದೇ ಪರಿಹಾರವನ್ನು ನೀಡಲಾಗಿಲ್ಲ ಮತ್ತು ಅನೇಕ ಹುಡುಗರು ಅಪಘಾತಕ್ಕೆ ಒಳಗಾಗಿದ್ದಾರೆ. ಆದರೆ, ಡೆಲಿವರಿ ಹುಡುಗರಿಗೆ ಯಾವುದೇ ಹೆಲ್ತ್ ಇನ್ಶೂರೆನ್ಸ್ ಮಾಡಲಾಗಿಲ್ಲ. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆದಿದೆ.

- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು

Edited By : Manjunath H D
PublicNext

PublicNext

16/04/2022 09:34 pm

Cinque Terre

70.03 K

Cinque Terre

2

ಸಂಬಂಧಿತ ಸುದ್ದಿ