ಬೆಂಗಳೂರು: ರಾಜ್ಯದಲ್ಲಿ ಹಿಜಾಬ್, ಹಲಾಲ್, ಆಜಾನ್ ವಿವಾದದ ಬೆನ್ನಲ್ಲೇ ಮ್ಯಾಂಗೋ ವಾರ್ ಶುರುವಾಗಿದೆ. ಇದ್ರಿಂದ ಮುಸ್ಲಿಂ ವ್ಯಾಪಾರಿಗಳು, ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ.. ಮಾವಿನ ಹಣ್ಣಿನ ವ್ಯಾಪಾರಿಗಳಲ್ಲಿ ಮುಸ್ಲಿಂರೇ ಹೆಚ್ಚಿದ್ದಾರೆ. ಇದೀಗ ಮಾವಿಗೂ ಧರ್ಮ ಸಂಕಟ ಎದುರಾಗಿದ್ದು, ಮುಸ್ಲಿಂ ವ್ಯಾಪಾರಿಗಳು ಕಂಗಾಲಾಗಿದ್ದಾರೆ..
ರಾಜ್ಯದಲ್ಲಿ ಹಲಾಲ್ ಬೆನ್ನಲ್ಲೇ ಮ್ಯಾಂಗೋ ವಾರ್ ಶುರುವಾಗಿದ್ದು, ಮಾವಿನ ಸೀಜನ್ ಆರಂಭವಾಗುತ್ತಿದ್ದಂತೆಯೇ ಕೋಲಾರ ಹಿಂದೂ ಸಂಘಟನೆಗಳಿಂದ ಹಿಂದೂ ಮ್ಯಾಂಗೋ ಅಭಿಯಾನ ಪ್ರಾರಂಭವಾಗಿದೆ.. ಹಿಂದೂಗಳಿಂದಲೇ ಮಾವು ಮಾರುಕಟ್ಟೆ ತೆರೆಯಲು ಪ್ಲ್ಯಾನ್ ಮಾಡಲು ಮುಂದಾಗಿದ್ದಾರೆ.. ಏನೇ ಮಾರುಕಟ್ಟೆ ಪ್ರಾರಂಭವಾದ್ರು, ಮಾವಿನ ಮಾರುಕಟ್ಟೆಯಲ್ಲಿ ಶೇ 75 ರಷ್ಟು ಮುಸ್ಲಿಂ ವ್ಯಾಪಾರಿಗಳು ಖರೀದಿ ಮಾಡ್ತಾರೆ..
ಇನ್ನೂ ಕೋಲಾರ, ಧಾರವಾಡ, ದಾವಣಗೆರೆ, ರಾಯಚೂರು, ಮೈಸೂರು, ತುಮಕೂರು, ಬಾದಾಮಿ,ಕೊಲ್ಲಾಪುರ, ಇನ್ನೂ ಮತ್ತಿತರ ಕಡೆಗಳಲ್ಲಿ ಮಾವಿನ ಹಣ್ಣನ್ನ ಹೆಚ್ಚಾಗಿ ಬೆಳೆಯುತ್ತಾರೆ.. ಇಲ್ಲಿ ನೂರಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ಮುಸ್ಲಿಂ ವ್ಯಾಪಾರಿಗಳೇ ಖರೀದಿ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಈ ಎಲ್ಲಾ ಹೊಸ ಅಭಿಯಾನ, ರೂಲ್ಸ್ ಗಳಿಂದ ರೈತರನ್ನ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಮತ್ತು ಭಾಷೆಯ ಸಮಸ್ಯೆ ಇರುವುದರಿಂದ ರೈತರಿಗೆ ವ್ಯವಹಾರ ಕಷ್ಟಾನೂ ಆಗುತ್ತದೆ, ಈ ಎಲ್ಲಾ ಬೆಳವಣಿಗೆಗಳು ಮುಂದೆ ಎಲ್ಲಿ ಹೋಗಿ ಮುಟ್ಟುತ್ತೋ ಗೊತ್ತಿಲ್ಲ.
Kshetra Samachara
07/04/2022 10:58 am