ವರದಿ: ಗಣೇಶ್ ಹೆಗಡೆ
ಬೆಂಗಳೂರು: ಹೊಟೇಲ್ ಕೊಠಡಿಗಳಲ್ಲಿ ವಾಸ್ತವ್ಯ ಹಾಗೂ ಆತಿಥ್ಯಕ್ಕೆ ಶೇ. 50 ನಿರ್ಬಂಧ ಅನ್ವಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಶುಕ್ರವಾರದಿಂದ ಜ. 2ರ ವರೆಗೆ ಹೊಟೇಲ್, ರೆಸ್ಟೋರೆಂಟ್, ಪಬ್ ಹಾಗೂ ಕ್ಲಬ್ ಗಳಲ್ಲಿ ಶೇ 50 ಮಾತ್ರ ಗ್ರಾಹಕರಿಗೆ ಅವಕಾಶ ಮಿತಿ ಸರ್ಕಾರ ಹಾಕಿದೆ.
ಕೋವಿಡ್ ನಿಯಂತ್ರಣ ಸಂಬಂಧ ಭಾನುವಾರ ಹೊರಡಿಸಿರುವ ಸರ್ಕಾರದ ಅದೇಶಕ್ಕೆ ನಿನ್ನೆ ಮತ್ತೆ ಸ್ಪಷ್ಟನೆ ನೀಡಿರುವ ಸರ್ಕಾರ ಪರಿಷ್ಕೃತ ಅದೇಶ ಪ್ರಕಟಿಸಿದೆ.
ಶೇ.50 ಮಿತಿ ಹೊಟೇಲ್ ಗಳಲ್ಲಿ ಗ್ರಾಹಕರಿಗೆ ಪಾನೀಯ ಪೂರೈಸುವ ಸ್ಥಳಗಳಿಗೆ ಮಾತ್ರ ಅನ್ವಯ ಆಗಲಿದೆ. ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಯಾವುದೇ ನಿರ್ಬಂಧ ಇರೋದಿಲ್ಲ ಎಂದು ಸರ್ಕಾರದ ಪರಿಷ್ಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
PublicNext
29/12/2021 09:58 am