ವರದಿ-ಗಣೇಶ್ ಹೆಗಡೆ
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಎರಡು ವಾರಗಳಿಂದ ಸತತವಾಗಿ ಸುರಿಯುತ್ತಿರುವ ಆಲಿಕಲ್ಲು ಸಹಿತ ಮಳೆಯಿಂದ ಟೊಮೆಟೋ ಬೆಳೆ ಹಾಳಾಗಿರುವ ಪರಿಣಾಮ ಪ್ರತಿ ಕೆ.ಜಿ. ಟೊಮೆಟೋ ಬೆಲೆ 80-100ಕ್ಕೆ ಏರಿಕೆಯಾಗಿದೆ.
ಕಳೆದ ವಾರ ಆನೇಕಲ್, ಹೊಸಕೋಟೆ ಮತ್ತಿತರ ಕೆಲವೆಡೆ ಆಲಿಕಲ್ಲು ಸಹಿತ ಬಿದ್ದ ಮಳೆಯಿಂದ ಟೊಮೆಟೋ ಬೆಳೆ ಸಾಕಷ್ಟು ಹಾನಿಯಾಗಿತ್ತು. ಹೀಗಾಗಿ ಮಾರುಕಟ್ಟೆಗೆ ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ಈ ನಡುವೆ ಮದುವೆ, ಗೃಹ ಪ್ರವೇಶ, ಊರ ಹಬ್ಬ, ಜಾತ್ರೆ ಇತ್ಯಾದಿಗಳು ನಡೆಯುತ್ತಿರುವುದರಿಂದ ಎಲ್ಲೆಡೆ ಅನ್ನ ದಾಸೋಹಗಳು ನಡೆಯುತ್ತಿವೆ. ಹೋಟೆಲ್‌ಗಳು ಕೂಡ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿವೆ. ಹೀಗಾಗಿ, ಅಡುಗೆಗೆ ಟೊಮೆಟೋ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದಿರುವುದರಿಂದ ಬೆಲೆಗಳು ಏರಿಕೆಯಾಗಿವೆ.
ರಾಜ್ಯದಲ್ಲಿ ಮಳೆಯಿಂದಾಗಿ ಟೊಮೆಟೋ ಬೆಳೆ ನೆಲ ಕಚ್ಚಿದೆ. ಹೀಗಾಗಿ ಮಹಾರಾಷ್ಟ್ರದಿಂದ ಪ್ರತಿ ದಿನ ಟೊಮೆಟೋ ರಾಜ್ಯಕ್ಕೆ ಬರುತ್ತಿದೆ. ಪ್ರತಿ ದಿನ 15 ಲೋಡ್ ಬರುತ್ತಿತ್ತು. ಇದೀಗ 12 ಲೋಡ್ ಮಾತ್ರ ಬರುತ್ತಿದ್ದು, ಸಗಟು ವ್ಯಾಪಾರದಲ್ಲಿ 22 ಕೆ.ಜಿ.ಯ ಟೊಮೆಟೋ ಬಾಕ್ಸ್‌ಗೆ 1100ಕ್ಕೆ ಮಾರಾಟವಾಗುತ್ತಿದೆ. ಆದರೆ ವ್ಯಾಪಾರಿಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಟೊಮೆಟೋ ಜತೆಗೆ ಬೀನ್ಸ್, ಕ್ಯಾರೆಟ್, ಹಸಿ ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ ಸೇರಿದಂತೆ ಹಲವು ತರಕಾರಿಗಳ ದರದಲ್ಲಿ ಏರಿಳಿಕೆಯಾಗಿದೆ. ಬೀನ್ಸ್ ದರ ಕೆ.ಜಿ.ಗೆ .90ಕ್ಕೆ ತಲುಪಿದೆ.
ವಿವಿಧ ತರಕಾರಿಗಳ ಹೀಗಿದೆ (ಪ್ರತಿ ಕೆ.ಜಿಗೆ)
ಟೊಮೆಟೋ ಪ್ರತಿ ಕೆ.ಜಿಗೆ .100ರೂ
ಬೀನ್ಸ್ ಪ್ರತಿ ಕೆ.ಜಿಗೆ .94ರೂ
ಹಾಗಲಕಾಯಿ ಪ್ರತಿ ಕೆ.ಜಿಗೆ .87ರೂ
ಕ್ಯಾರೆಟ್ ಪ್ರತಿ ಕೆ.ಜಿಗೆ .67ರೂ
ಏಲಕ್ಕಿ ಬಾಳೆ ಪ್ರತಿ ಕೆ.ಜಿಗೆ .70ರೂ
ಬಿಳಿ ಬದನೆಕಾಯಿ ಪ್ರತಿ ಕೆ.ಜಿಗೆ .46ರೂ
ಹಾಗಲಕಾಯಿ ಪ್ರತಿ ಕೆ.ಜಿಗೆ .54ರೂ
ದಪ್ಪ ಮೆಣಸಿನಕಾಯಿ ಪ್ರತಿ ಕೆ.ಜಿಗೆ .75ರೂ
ಹಸಿಮೆಣಸಿನಕಾಯಿ ಬಜ್ಜಿ ಮೆಣಸಿನಕಾಯಿ ಪ್ರತಿ ಕೆ.ಜಿಗೆ .75ರೂ
ಎಲೆಕೋಸು ಪ್ರತಿ ಕೆ.ಜಿಗೆ .20ರೂ
ನುಗ್ಗೆಕಾಯಿ ಪ್ರತಿ ಕೆ.ಜಿಗೆ .44ರೂ
ಮೂಲಂಗಿ ಪ್ರತಿ ಕೆ.ಜಿಗೆ .32ರೂ
PublicNext
13/05/2022 10:41 pm