ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆಯೂ ಶೇ 5ರಷ್ಟು ಸರಕು ಸೇವಾ ಸುಂಕ (Goods and Service Tax – GST) ವಿಧಿಸಿರುವುದನ್ನು ಖಂಡಿಸಿ ಕೃಷಿ ಮಾರುಕಟ್ಟೆ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಹಲವು ಸಂಘಟನೆಗಳು ಎಪಿಎಂಸಿ ಇಂದು ಯಾರ್ಡ್ ಬಂದ್ ಮಾಡಿದೆ.
ಯಶವಂತಪುರ ಎಪಿಎಂಸಿಯ ಮಾಲೀಕರು, ವರ್ತಕರು, ಕಾರ್ಮಿಕ ಸಂಘಟನೆಗಳು ಬಂದ್ ಬೆಂಬಲ ಘೋಷಿಸಿವೆ. ಗೋಧಿ, ಅಕ್ಕಿ, ಬೇಳೆಕಾಳುಗಳಿಗೆ ಕೇಂದ್ರ ಸರ್ಕಾರವು ಶೇ 5ರ ಜಿಎಸ್ಟಿ ಹೇರಿರುವುದನ್ನು ವರ್ತಕರು ಹಾಗೂ ಕಾರ್ಮಿಕ ಸಂಘಟನೆಗಳು ಖಂಡಿಸಿವೆ.
ಕೇಂದ್ರದ ನಿರ್ಧಾರ ವಿರೋಧಿಸಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಯಾರ್ಡ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ಯಶವಂತಪುರ ಎಪಿಎಂಸಿ ಯಾರ್ಡ್ ನಿಂದ ನೀಡಿರುವ ವರದಿ ಇಲ್ಲಿದೆ.
PublicNext
15/07/2022 06:04 pm