ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ದೇವನಹಳ್ಳಿಲಿ ಆನೆ ಮೇಲೆ ದುರ್ಗಾಮಹೇಶ್ವರಿ ದೇವಿ ಅಂಬಾರಿ ಉತ್ಸವ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಗಡ್ಡದನಾಯಕನಹಳ್ಳಿಲಿ ದುರ್ಗಾಪರಮೇಶ್ವರಿ ದೇವಿಗೆ ಆನೆ ಮೇಲೆ ಅಂಬಾರಿ ಉತ್ಸವ ನಡೆಸಲಾಯಿತು.

ಅಂಬಾರಿ ಉತ್ಸವದ ಅಂಗವಾಗಿ ಉತ್ಸವ ಮೂರ್ತಿಗೆ ಹೂವಿನ ಅಲಂಕಾರ, ವಿಶೇಷ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು.

ವಿಧಿವಿಧಾನಗಳಂತೆ ಪೂಜಾ ಕಾರ್ಯ ನೆರವೇರಿದವು. ಪಲ್ಲಕ್ಕಿ ಮೇಲಿನ ದೇವರ ಮೂರ್ತಿನ ರಸ್ತೆಯ ಎರಡೂ ಕಡೆಯ ಜನ ಭಕ್ತಿಯಿಂದ ನಮಿಸಿ ಪುಷ್ಪಾರ್ಚನೆ ಮಾಡಿ ಪುನೀತರಾದರು.

ಜಂಗಮಕೋಟೆಯ ಪಾಂಡುರಂಗ ಜಾನಪದ ಕಲಾತಂಡದಿಂದ ವಿವಿಧ ವೇಷ ಭೂಷಣ ನೃತ್ಯ, ಡೊಳ್ಳುಕುಣಿತ, ವೀರಗಾಸೆ, ವೀರಭದ್ರಕುಣಿತ, ಕುಣಿತ, ಚಂಡೇ ವಾದನ, ಕೇರಳದ ಸಾಂಸ್ಕೃತಿಕ ತಂಡದಿಂದ ಮಹಿಷಾಸುರ ಮರ್ಧನ ನೃತ್ಯ ರೂಪಕಗಳೊಂದಿಗೆ ಅಂಬಾರಿ ಉತ್ಸವ ಯಶಸ್ವಿಯಾಗಿ ನಡೆಯಿತು.

ದೇವಾಲಯವನ್ನ ವೈಕುಂಠದ ಮಾದರಿಲಿ ಅಲಂಕಾರಿಕ ವಸ್ತು, ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸಾವಿರಾರು ಜನ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ದುರ್ಗಾಸಪ್ತಸತಿ ಪಾರಾಯಣ, ಚಂಡಿಕಾಹೋಮ, ಪೂರ್ಣಾಹುತಿ, ಕುಂಭಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹೋಮ ಸೇರಿದಂತೆ ವಿವಿಧ ಪೂಜಾ ವಿಧಾನಗಳ ಮೂಲ ದೇವರಕಾರ್ಯ ನಡೆಯಿತು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್.

Edited By :
PublicNext

PublicNext

05/10/2022 03:47 pm

Cinque Terre

23.12 K

Cinque Terre

0