ಬೆಂಗಳೂರಿನಲ್ಲಿ ಕೊಲೆಯಾಗೋದು ಸರ್ವೆ ಸಾಮಾನ್ಯ ಆಗೋಗಿದೆ. ಆದ್ರೆ ನಗರದ ಕೋಣಸಂಧ್ರದ ಮತ್ತು ಹೆಮ್ಮಿಗೆಪುರ ಮಧ್ಯದಲ್ಲಿ ಈ ಸ್ವಲ್ಪ ದಿನಗಳ ಹಿಂದೆ ಮುಖವೆ ಗುರ್ತು ಸಿಗದೇ, 70 ಕ್ಕೂ ಹೆಚ್ಚು ಕಡೆ ಇರಿದು ಹೇಮಂತ್ ಎಂಬಾತನನ್ನ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ರು. ಇದು ಸುತ್ತ-ಮುತ್ತಾ ಊರುಗಳ ಜನರು ಬೆಚ್ಚಿ ಬೀಳಿಸಿತ್ತು. ಈ ಜಾಗದಲ್ಲಿ ಒಂದು ಬೀದಿ ದೀಪದ ವ್ಯವಸ್ಥೆಗಳಿರಿಲಿಲ್ಲ ಹೀಗಾಗಿ ಇಲ್ಲಿಗೆ ಜನ ಇಲ್ಲಿ ಓಡಾಡಲು ಭಯ ಬೀಳುತ್ತಿದ್ರು.
ಆದ್ರೀಗ ಕೊಲೆಯ ನಂತರ ಕೋಡಿಪಾಳ್ಯದಿಂದ ಹೆಮ್ಮಿಗೆಪುರದ ವರೆಗೂ ಬೀದಿ ದೀಪಗಳನ್ನ ಹಾಕಿದ್ದಾರೆ. ಇನ್ನೂ ಇಲ್ಲಿ ಲೈಟ್ ಹಾಕಿಸಿರೋದ್ರಿಂದ ಈಗ ಜನ್ರು ನಿಶ್ಚಿಂತೆಯಿಂದ ಓಡಾಡುತ್ತಿದ್ದಾರೆ.
ಆದ್ರೆ ಒಂದೊಂದು ಟೈಂ ನಲ್ಲಿ ಲೈಟ್ಸ್ ಆನ್ ಮಾಡೋದೇ ಇಲ್ಲ. ಇದು ಇಲ್ಲಿನ ಸಮಸ್ಯೆ. ಕೋನಸಂದ್ರ ಕೆರೆಯ ಹತ್ತಿರಾ ಹಲವಾರು ಕಳ್ಳತನವಾಗ್ತಿದೆ. ಆ ಸರ್ಕಲ್‌ನಲ್ಲು ಕೂಡ ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಹಾಕಬೇಕಿದೆ. ಅಧಿಕಾರಿಗಳು ಎಚ್ಚೆತ್ತು ಕಳ್ಳರನ್ನ, ಕೊಲೆಗಡುಕರಿಗೆ ಕಡಿವಾಣ ಹಾಕಬೇಕಿದೆ. ಇನ್ನೂ ಬೀದಿ ದೀಪದಲ್ಲಿ ಏನಾದ್ರು ಸಮಸ್ಯೆಯಾಗಿದ್ದಲ್ಲಿ, ಬೆಸ್ಕಾಂ ಅಧಿಕಾರಿಗಳು ಕೂಡಲೆ ಪರಿಶೀಲನೆ ಮಾಡಿ ದೀಪಗಳನ್ನ ರೆಡಿ ಮಾಡಬೇಕಿದೆ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
01/10/2022 02:51 pm