ಆ ಏರಿಯಾದ ಜನರಿಗೆ ಇದ್ದಿದ್ದು ಅದೊಂದೇ ಆಟದ ಮೈದಾನ. ಅದರಲ್ಲೇ ದಿನನಿತ್ಯ ಆಟವಾಡ ಬೇಕಾಗಿದೆ. ಆದರೆ ರಾಜಕಾರಣಿಗಳ ಒತ್ತಡಕ್ಕೆ ಆಟದ ಮೈದಾನದಲ್ಲಿ ಬಿಬಿಎಂಪಿ ಖಾಸಗಿ ಕಮರ್ಷಿಯಲ್ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡಲು ಮುಂದಾಗಿತ್ತು. ಪ್ರತಿ ವಾರದ ಅಂತ್ಯದಲ್ಲಿ ಜಯನಗರದ ನಿವಾಸಿಗಳು ಆಟವಾಡಲು ಶಾಲಿನಿ ಆಟದ ಮೈದಾನಕ್ಕೆ ಬಂದಾಗ ಬರೀ ಕಮರ್ಷಿಯಲ್ ಸ್ಟಾಲ್ಸ್ ಗಳೇ ಕಂಡುಬರುತ್ತಿತ್ತು. ಇದರಿಂದ ಇಲ್ಲಿನ ನಿವಾಸಿಗಳಿಗೆ ಆಟವಾಡಲು ಆಗುತ್ತಿರಲಿಲ್ಲ ಇದರ ಬಗ್ಗೆ ಸ್ಥಳೀಯ ಶಾಸಕರಾದ ಸೌಮ್ಯ ರೆಡ್ಡಿ ಅವರಿಗೆ ಮನವಿ ಕೂಡ ಮಾಡಿದ್ರು. ಮನವಿಗೆ ಸ್ಪಂದಿಸಿದ ಶಾಸಕಿ ಬಿಬಿಎಂಪಿ ಅಧಿಕಾರಿಗಳಿಗೆ ಆಟದ ಮೈದಾನವನ್ನು ಕಮರ್ಷಿಯಲ್ ಕಾರ್ಯಕ್ರಮಗಳಿಗೆ ಅನುಮತಿ ನೀಡದಂತೆ ಆದೇಶ ಕೂಡ ಮಾಡಿದರು.
ಆದರೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಕಚೇರಿಯಿಂದ ತರುವ ಅನುಮತಿ ಪತ್ರಕ್ಕೆ ಬಿಬಿಎಂಪಿ ಅನುಮತಿ ನೀಡುತ್ತಿತ್ತು. ಮತ್ತು ಇದರಿಂದ ಗ್ರೌಂಡ್ ಸಂಪೂರ್ಣವಾಗಿ ಹಾಳಾಗಿ ಹೋಗಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಮತ್ತು ಈ ತಿಂಗಳು ನಡೆಯುವ ದಸರಾ ಹಬ್ಬದಲ್ಲಿ ಖಾಸಗಿ ಕಂಪನಿಯೊಂದು ಹತ್ತು ದಿನ ಕಾರ್ಯಕ್ರಮ ನಡೆಸಲು ಬಿಬಿಎಂಪಿಯಿಂದ ಹನುಮತಿ ತಂದಿದ್ದರು.ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಇಂದು ಆಟದ ಮೈದಾನದ ಎದುರು ಪ್ರತಿಭಟನೆ ನಡೆಸಿದರು.
ಆದಷ್ಟು ಬೇಗ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲಿನಿ ಆಟದ ಮೈದಾನದಲ್ಲಿ ಆಗಿರುವ ದುರವಸ್ಥೆಯನ್ನು ಸರಿಪಡಿಸಿ ಕೊಡಬೇಕೆಂದು ಇಲ್ಲವಾದರೆ ಮುಂದಿನ ದಿನಗಳಲ್ಲಿ ಆಟದ ಮೈದಾನದಲ್ಲಿ ಕೃಷಿ ಮಾಡುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
27/09/2022 11:01 am