ಬೆಂಗಳೂರು: ಮಾಜಿ ಸಿಎಂಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಯವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಪಿ ಭವನದಲ್ಲಿ ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಸಭೆ ನಡೆಸಲಾಯಿತು ಸಭೆ ನಂತರ ಮಾತನಾಡಿದ HDK ಎಲ್ಲಾ ಕಾರ್ಯಕಾರಿಣಿ ಸದಸ್ಯರು, ಪದಾಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಿದ್ದೇವೆ ಎಲ್ಲರಿಗೂ ಮುಂದಿನ 6 ತಿಂಗಳು ಹೇಗೆ ಕೆಲಸ ಮಾಡ್ಬೇಕು ಅಂತ ಸಲಹೆ ಕೊಟ್ಟಿದ್ದೇವೆ. ಜಿಲ್ಲಾವಾರು ಉಸ್ತುವಾರಿ ಕೊಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ, ಜವಾಬ್ದಾರಿ ಹಂಚಿಕೆ ಬಗ್ಗೆ ಸಿಎಂ ಇಬ್ರಾಹಿಂ ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇನೆ. ಬಿಜೆಪಿಯವರ ಜನಸ್ಪಂದನ ಧಮ್ಮು, ತಾಕತ್ತಿನ ವಾಕ್ಸಮರಕ್ಕೆ ಮಾತ್ರ ಸೀಮಿತವಾಗಿದೆ.
ನಮ್ಮ ಪಂಚರತ್ನ ಯೋಜನೆ ಏನಿದೆ ಜನರ ಕಲ್ಯಾಣಕ್ಕಾಗಿ, ಜನತಾ ಜಲಧಾರೆ ಉದ್ದೇಶ ರಾಜ್ಯದ ಎಲ್ಲಾ ರೈತರಿಗೂ ವ್ಯವಸಾಯಕ್ಕೆ ನೀರು ಕೊಡಬೇಕು ಎಂಬುದು. ನಮ್ಮ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ, ರೈತರ ಏಳಿಗೆಗಾಗಿ, ಅಕ್ಟೋಬರ್ 8ನೇ ತಾರೀಖಿನಂದು ಜನತಾಮಿತ್ರ ಸಮಾರೋಪ ಸಮಾರಂಭ ಮಾಡಲು ನಿರ್ಧರಿಸಿದ್ದೇವೆ. ನವೆಂಬರ್ 1ರಂದು ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪಂಚರತ್ನ ಯೋಜನೆಗೆ ಚಾಲನೆ ಕೊಡ್ತೇವೆ.
ಪೇ ಸಿಎಂ ಅಭಿಯಾನದ ಬಗ್ಗೆ ಮಾತನಾಡಿದ HDK ರಾಷ್ಟ್ರೀಯ ಪಕ್ಷಗಳು ಇದನ್ನ ಶುರು ಮಾಡಿವೆ. ಈ ರೀತಿಯ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಹೊರಟಿದ್ದಾರೆ. ಪೇ ಸಿಎಂ ಹಿಂದೆ ಕಾಂಗ್ರೆಸ್ ಕಾಲದಲ್ಲಿ ನಡೆದಿರಲಿಲ್ಲವೇ, ಮುಂದೆ ಅಧಿಕಾರಕ್ಕೆ ಬಂದರೆ ಹೇಗೆ ಸರಿ ಮಾಡ್ತೇವೆ ಎಂದು ಕಾಂಗ್ರೆಸ್‌ನವರು ಹೇಳಬೇಕಿತ್ತು.ಆದರೆ ಪೋಸ್ಟರ್ ಅಂಟಿಸಿಕೊಂಡು ಹೊರಟಿದ್ದಾರೆ, ಪರ್ಸಂಟೇಜ್ ವಿಚಾರ ಪ್ರಸ್ತಾಪ ಮಾಡಿದ್ರೆ, ದಾಖಲೆ ಜನರ ಮುಂದೆ ಇಡಬೇಕು. ಜನರಲ್ಲಿ ಅಗೌರವ ತೋರುವ ಕಾರ್ಯಕ್ರಮಕ್ಕೆ ನಮ್ಮ ಬೆಂಬಲವಿಲ್ಲ. ಈ ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲ ಅತ್ಯಂತ ಭಂಡತನದಿಂದ ವಿತಂಡವಾದ ಮಾಡ್ತಾ ಇದ್ದಾರೆ. ಈ ಸರ್ಕಾರಕ್ಕೆ ಆತ್ಮಸಾಕ್ಷಿ ಅನ್ನೋದು ಉಳಿದಿಲ್ಲ, ಇವರಿಗೆ ಪಾಪಪ್ರಜ್ಞೆ ಅನ್ನೋದೆ ಇಲ್ಲ ಅಂತ ಬಿಜೆಪಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
PublicNext
27/09/2022 07:51 am