ಬೆಂಗಳೂರು : ಕಾಂಗ್ರೆಸ್ ಪೋಸ್ಟರ್ ಅಭಿಯಾನ ಹಾಸ್ಯಾಸ್ಪದ. ಕರೆಪ್ಸನ್ ಇಲ್ಲದೆ ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಇಲ್ಲದೆ ಕರೆಪ್ಸನ್ ಇಲ್ಲ.ಒಬ್ಬರು ಜೈಲಕ್ಕಿ, ಬೇಲ್ ಮೇಲೆ ಇದ್ದಾರೆ.ಅವರು ಮತ್ತೆ ಯಾವಾಗ ಬೇಕಾದರೂ ಜೈಲಿಗೆ ಹೋಗಬಹುದು.ಅವರು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಸಿಟಿ ರವಿ ಕಿಡಿಕಾರಿದ್ದಾರೆ.
ಇನ್ನೂ ನೀರಾವರಿ ಇಲಾಖೆಯಲ್ಲಿ ಅಕ್ರಮ ಎಸಗಿ, ಭ್ರಷ್ಟಾಚಾರ ಚಾಂಪಿಯನ್ ಆಗಿರುವರು,ರೀಡಿಯೋ ಕರೆಪ್ಸನ್ ಕಿಂಗ್, ತನ್ನ ಸರ್ಕಾರ ಎಲ್ಲ ಹಗರಣಗಳನ್ನು ಮುಚ್ಚಿ ಹಾಕೋದು ಎಂದು ಕಲಿತುಕೊಂಡು ಬಂದವರು.ಇವರು ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ.
ಕಾಂಗ್ರೆಸ್ ಮತ್ತೆ ಭ್ರಷ್ಟಾಚಾರ ಎರಡು ಒಂದೇ ನಾಣ್ಯದ ಮುಖಗಳು ಎಂದು ಕಾಂಗ್ರೆಸ್ ನಾಯಕರ ಪೇ ಸಿಎಂ ಪೋಸ್ಟರ್ ಅಭಿಯಾನಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಟಾಂಗ್ ಕೊಟ್ಟಿದ್ದಾರೆ.
PublicNext
23/09/2022 08:54 pm