ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೊಡ್ಡಬಳ್ಳಾಪುರದ ಹಾಡೋನಹಳ್ಳಿ ಪಂಚಾಯಿತಿ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದ ಸದಸ್ಯ; ತಿರುಗಿಬಿದ್ದ ಉಳಿದ ಸದಸ್ಯರು

ಹಾಡೋನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿದ್ದ, ಭ್ರಷ್ಟಾಚಾರದ ಬಗ್ಗೆ ಸದಸ್ಯನೊಬ್ಬ ಪ್ರಶ್ನೆ ಮಾಡಿದ್ರು, ಆತನ ವಿರುದ್ಧ ಮುಗಿಬಿದ್ದ ಉಳಿದ ಪಂಚಾಯತ್ ಸದಸ್ಯರು ಕುಡಿತದ ಆರೋಪ ಮಾಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಪಂಚಾಯತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಪಂಚಾಯತ್ ಸದಸ್ಯರೇ ಆದ ಆನಂದ್ ಕುಮಾರ್ ಹೆಚ್.ಕೆ. ತಿರುಗಿಬಿದ್ದಿದ್ದಾರೆ, ಜನರಿಗೆ ಮೂಲಭೂತ ಸೌಕರ್ಯಗಳನ್ನ ಓದಗಿಸುವಂತೆ ಪಿಡಿಓಯಿಂದ ಹಿಡಿದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿವರಿಗೂ ನೂರಕ್ಕೂ ಹೆಚ್ಚು ಪತ್ರ ಬರೆದಿದ್ದಾರೆ, ಆನಂದ್ ಕುಮಾರ್ ರವರ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲಿಗೆ ಕುಡಿತದ ಆರೋಪ ಮಾಡಿದ್ದಾರೆ ಉಳಿದ ಸದಸ್ಯರು.

ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವ ಉಳಿದ ಸದಸ್ಯರು ಕುಡಿದು ಕಚೇರಿಗೆ ಬರ್ತಾರೆ, ಅಧಿಕಾರಿಗಳಿಗೆ ಬೆದರಿಕೆ ಯಾಕುತ್ತಾರೆಂಬ ಆರೋಪ ಮಾಡುತ್ತಿದ್ದಾರೆ, ಆನಂದ್ ಕುಮಾರ್ ಬರೆದಿರುವ ನೂರಕ್ಕು ಹೆಚ್ಚು ಪತ್ರಗಳಿಗೆ ಸ್ಪಂದಿಸದ ತಾಲೂಕು ಪಂಚಾಯತ್ ಇಓ ಒಂದೇ ಒಂದು ಆರೋಪದ ಪತ್ರಕ್ಕೆ ಸ್ಪಂದಿಸಿ ವಿಚಾರಣೆಗಾಗಿ ಅಧಿಕಾರಿಗಳನ್ನ ಕಳಿಸಿರುವುದು ಚರ್ಚೆಗೆ ಕಾರಣವಾಗಿದೆ, ಗ್ರಾಮಸ್ಥರು ಆನಂದ್ ಕುಮಾರ್ ಪರವಾಗಿದ್ದು ಕುಡಿತದ ಆರೋಪ ಕುತಂತ್ರದ ಭಾಗವಾಗಿದೆ ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.

ಅಧಿಕಾರ ವಿಕೇಂದ್ರಿಕಾರಣಕ್ಕಾಗಿ ಗ್ರಾಮ ಪಂಚಾಯತ್ ವ್ಯವಸ್ಥೆ ಜಾರಿ ಮಾಡಲಾಗಿದೆ, ಜನರ ಸಮಸ್ಯೆಗಳಿಗೆ ಸ್ಪಂದಿಸ ಬೇಕಾದ ಗ್ರಾಮ ಪಂಚಾಯತಿಗಳು ಅಭಿವೃದ್ಧಿ ಕೆಲಸ ಬಿಟ್ಟ ದ್ವೇಷ ರಾಜಕಾರಣಕ್ಕೆ ಸಮಯ ಮೀಸಲಿಟ್ಟಿರುವುದು ದೇಶದ ದುರಂತವಾಗಿದೆ.

Edited By :
PublicNext

PublicNext

22/09/2022 04:05 pm

Cinque Terre

27.77 K

Cinque Terre

0

ಸಂಬಂಧಿತ ಸುದ್ದಿ