ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಿವಮೊಗ್ಗದಲ್ಲಿ ಐಸಿಸ್ ಸಂಘಟನೆಯ ಇಬ್ಬರು ಉಗ್ರರ ಅರೆಸ್ಟ್; ಖಚಿತಪಡಿಸಿದ ಗೃಹ ಸಚಿವ

ಬೆಂಗಳೂರು: ಶಿವಮೊಗ್ಗದಲ್ಲಿ ಇಬ್ಬರ ಉಗ್ರರ ಬಂಧನವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಖಚಿತಪಡಿಸಿದ್ದಾರೆ.

ವಿಧಾನ ಸೌಧದಲ್ಲಿ ಮಾತನಾಡಿದ ಗೃಹ ಸಚಿವರು, ಐಸಿಸ್ ಸಂಘಟನೆಗೆ ಸಂಬಂಧಿಸಿದ ಮೂವರು ಉಗ್ರರನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ. ಓರ್ವ ತೀರ್ಥಹಳ್ಳಿ ನಿವಾಸಿಯಾಗಿದ್ದು, ಮತ್ತೋರ್ವನಿಗೆ ಕರಾವಳಿ ನಂಟು ಇದೆ. ಶಿವಮೊಗ್ಗ ತೀರ್ಥಹಳ್ಳಿ ಭಾಗದಲ್ಲಿ ಇಂತಹವರು ಇದ್ದಾರೆ ಅನ್ನೋದೆ ಆತಂಕಕಾರಿ ವಿಚಾರ ಎಂದು ಹೇಳಿದರು.

ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ತಿಳಿಸುತ್ತೇನೆ. ಆರೋಪಿಗಳ ವಿಚಾರಣೆ ನಡೆಸುತ್ತಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮತ್ತಷ್ಟು ವಿಚಾರಗಳು ತನಿಖೆಯಿಂದ ಬರಬೇಕಿದೆ. ತನಿಖೆಯನ್ನು ಎನ್‌ಐ‌ಎಗೆ ವಹಿಸಿದರೆ ಏನಾಗುತ್ತಿತ್ತು ಅಂತ ಹಲವರು ಪ್ರಶ್ನಿಸುತ್ತಿದ್ದರು. ಈ ಪ್ರಕರಣ ಅವರೆಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲಿದೆ ಎಂದು ಮಾಹಿತಿ ನೀಡಿದರು.

Edited By : Nagesh Gaonkar
PublicNext

PublicNext

20/09/2022 04:58 pm

Cinque Terre

23.36 K

Cinque Terre

4

ಸಂಬಂಧಿತ ಸುದ್ದಿ