ದೊಡ್ಡಬಳ್ಳಾಪುರ: ತಾಲೂಕಿನ ಕಸಬಾ ಹೋಬಳಿಯ ದಾಸಗೊಂಡನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ, ಎರಡು ಎಕರೆ 11 ಗುಂಟೆ ಸರಕಾರಿ ಜಮೀನು ತಹಸೀಲ್ದಾರ್ ಮೋಹನಕುಮಾರಿ ಸೂಚನೆ ಮೇರೆಗೆ ಕಂದಾಯ ಅಧಿಕಾರಿಗಳು ತೆರವು ಮಾಡಿದ್ದಾರೆ.
ದಾಸಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 53 ರಲ್ಲಿ ಸ್ಮಶಾನಕ್ಕೆ ಮೀಸಲಿಟ್ಟದ್ದ ಸರಕಾರಿ ಜಮೀನನ್ನು ಇದೇ ಗ್ರಾಮದ ಕೃಷ್ಣಪ್ಪ, ಅಶ್ವಥಪ್ಪ, ಚಂದ್ರಶೇಖರ್ ಎಂಬವರು ಒತ್ತುವರಿ ಮಾಡಿಕೊಂಡಿದ್ದರು. ಗ್ರಾಮದ ಮುಖಂಡರು ನೀಡಿದ ದೂರಿನ ಮೇಲೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಶಿವಪ್ರಸಾದ್, ಗ್ರಾಮ ಲೆಕ್ಕಿಗರಾದ ಗಂಗರಾಜು, ರಮೇಶ್, ಪಿಡಿಓ ಸೋಮಮೂರ್ತಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಮಾಡಲಾಯಿತು.
Kshetra Samachara
13/10/2022 08:21 pm