ಬೆಂಗಳೂರು : ಬಿಪಿಎಲ್ ಕಾರ್ಡ್ ರದ್ದತಿ ವಿಚಾರದ ಕುರಿತು ಎದ್ದಿರುವ ವಿವಾದದ ಬಗ್ಗೆ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಬಡವರ ರೇಷನ್ ಕಾರ್ಡ್ ರದ್ದಾಗೋದಿಲ್ಲ, ಸಿಗದವರಿಗೆ ಕೊಡುವ ಕೆಲಸ ಆಗುತ್ತೆ ಎಂದರು.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಹೆಚ್ಚು ರೇಷನ್ ಕಾರ್ಡ್ ಇದೆ, ಬೇರೆ ರಾಜ್ಯಗಳಲ್ಲಿ ಶೇ.40 ರಷ್ಟು ಕಾರ್ಡ್‌ಗಳಿದ್ರೆ ನಮ್ಮಲ್ಲಿ ಶೇ.80 ಕಾರ್ಡ್‌ಗಳಿವೆ. ಯಾರು ತೆರಿಗೆ ಕಟ್ತಾರೆ ಅವರ ಕಾರ್ಡ್ ರದ್ದಾಗುತ್ತೆ, ಉದಾಹರಣೆಯಾಗಿ ನನ್ನೇ ತೆಗೆದುಕೊಳ್ಳಿ ಎಂ.ಬಿ ಪಾಟೀಲ್‌ಗೆ ರೇಷನ್ ಕಾರ್ಡ್ ಯಾಕೆ ಬೇಕು? ನಾನು ಇನ್‌ಕಂ ಟ್ಯಾಕ್ಸ್ ಕಟ್ಟುತ್ತೇನೆ, ನಾನು ಬಿಪಿಎಲ್ ಹೊಂದಿದ್ರೆ ಅದು ಅನರ್ಹ ಅಲ್ವೇ..? ಇಂತಹ ಕಾರ್ಡ್ ಕಟ್ ಮಾಡಬೇಕಲ್ವಾ? ಅರ್ಹರಿಗೆ ಕಾರ್ಡ್ ಕೊಡಿಸುವ ಕೆಲಸವನ್ನ ಸರ್ಕಾರ ಮಾಡ್ತೇವೆ ಎಂದರು.
ಅಲ್ದೇ ಕಾರ್ಡ್ ತಿದ್ದುಪಡಿಗೆ ಗ್ಯಾರಂಟಿ ಯೋಜನೆಗೆ ಸಂಬಂಧ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.
PublicNext
20/11/2024 08:24 pm