ಬೆಂಗಳೂರು : ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ವಿದ್ಯಾರ್ಥಿಯೋರ್ವ ವಿಡಿಯೋ ಕಾನ್ಫರೆನ್ಸ್ನಲ್ಲಿ ಹೇಳಿದ್ದು ಸಚಿವ ಮಧುಬಂಗಾರಪ್ಪ ಮುಜುಗರಕ್ಕೀಡಾದ ಘಟನೆ ನಡೆದಿದೆ.
ವಿಧಾನಸೌಧದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ತರಗತಿಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸಚಿವ ಮಧು ಬಂಗಾರಪ್ಪ ವಿವಿಧ ಕಾಲೇಜುಗಳಿಂದ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದರು. ಇದೇ ಸಮಯದಲ್ಲಿ ಕಾಲೇಜಿನ ವಿದ್ಯಾರ್ಥಿಯೊಬ್ಬ ವಿದ್ಯಾಮಂತ್ರಿಗೆ ಕನ್ನಡ ಬರಲ್ಲ ಎಂದಿದ್ದಾನೆ, ಅದು ಸಚಿವರಿಗೆ ವಿದ್ಯಾರ್ಥಿ ಹೇಳಿದ್ದು ಗೊತ್ತಾಗಿ ಗಲಿಬಿಲಿಗೊಂಡು ಕೋಪಗೊಂಡರು.
'ಹೇ ಯಾರೋ ಅವನು ಹಾಗೆ ಮಾತನಾಡೋದು, ವಿದ್ಯಾಮಂತ್ರಿಗೆ ಕನ್ನಡ ಬರೋಲ್ಲ ಅಂದಿದ್ದು, ನಾನು ಉರ್ದುನಲ್ಲಿ ಮಾತಾಡ್ತಿದ್ದಿನಾ? ಎಂದು ಸಚಿವರು ಗರಂ ಆದರು. ಯಾರು ಆ ಅವಿವೇಕಿ ಮಾತನ್ನ ಕೇಳಿಸಿಕೊಳ್ಳಬೇಡಿ, ಯಾರು ಹೀಗೆ ಅಂದವರು ಡಿಟೇಲ್ಸ್ ತೆಗೆದುಕೊಳ್ಳಿ , ರೆಕಾರ್ಡ್ ಮಾಡಿ ಅವರ ಮೇಲೆ ಸೀರಿಯಸ್ ಆಕ್ಷನ್ ತೆಗೆದುಕೊಳ್ಳಬೇಕು ಎಂದ ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚಿಸಿದರು.
PublicNext
20/11/2024 05:10 pm