ಬೆಂಗಳೂರು: ಇಂದು ಬೆಂಗಳೂರಿನಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ಸುಮಾರು 50 ಸಾವಿರಕ್ಕೂ ಹೆಚ್ಚು ರೈತರು ಸೇರಿ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದರು. ಇನ್ನೂ ರೈತರಿಗೆ ಕಬ್ಬಿನ ಎಮ್.ಆರ್.ಪಿ ದರ ಕನಿಷ್ಟ 3500 ರೂಗಳಿಗೆ ನಿಗದಿಯಾಗಬೇಕು ಮತ್ತು ಕೃಷಿ ಪಂಪ್ ಸೆಟ್ಟ್‌ಗಳಿಗೆ ನೀಡುವ ಉಚಿತ ವಿದ್ಯತ್ ನಿಲ್ಲಿಸುವ ಹುನ್ನಾರ ನಿಲ್ಲಬೇಕು, ರೈತರ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಸಿಗಬೇಕು, ಮತ್ತು ಕೊರೊನಾ ಲಾಕ್‌ಡೌನ್ ಸಂಕಷ್ಟದಲ್ಲಿದ್ದ ಮಳೆಹಾನಿ, ಅತಿವೃಷ್ಟಿ, ಬೆಳೆನಷ್ಟಕ್ಕೆ ಸಂಬಂಧಪಟ್ಟಂತೆ ಮೂರುವರೆ ಲಕ್ಷ ರೈತರ ಆತ್ಮಹತ್ಯೆ ಪರಿಗಣಿಸಿ ದೇಶದ ರೈತರ ಸಾಲಮನ್ನಾ ಆಗಬೇಕೆಂದು ವಿವಿಧ ಬೇಡಿಕೆಗಳನ್ನ ಇಟ್ಟುಕೊಂಡು ಪ್ರತಿಭಟನೆಗೆ ರೈತರು ಮುಂದಾಗಿದರು. ಈ ವೇಳೆ ರೈತರ ಪ್ರತಿಭಟನೆ ತಾರಕಕ್ಕೇರಿದ ಬೆನ್ನೇಲೆ ರೈತರನ್ನು ಪೊಲೀಸರು ವಶಪಡಿಸಿಕೊಂಡರು.
PublicNext
26/09/2022 05:51 pm